

ನವದೆಹಲಿ: ಭಾರತ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್‌ಗೂ ಸಾಮಾಜಿಕ ಜಾಲತಾಣಗಳಿಗೂ ಎಲ್ಲಿಲ್ಲದ ನಂಟು. ಭಾರತದ ಇತರ ಕ್ರಿಕೆಟಿಗರಿಗೆ ಹೋಲಿಸಿದರೆ ಚಾಹಲ್ ಇನ್‌ಸ್ಟಾಗ್ರಾಂ ಬಳಸುವುದು ಸ್ವಲ್ಪ ಜಾಸ್ತಿಯೇ. ಹಿಂದಿನ ವರ್ಷದ ಇದೇ ದಿನ ಯಾವ ಘಟನೆ ಜರುಗಿತ್ತು, ಆ ದಿನ ನಡೆದ ಘಟನೆ ಮೆಲುಕು ಹಾಕಲು ವಿಡಿಯೋ ಪ್ರಕಟಿಸುತ್ತಾರೆ. ಹೀಗೆಯೇ 2018ರ ಐಪಿಎಲ್ ವೇಳೆ ಬಾಲಿವುಡ್ ನಟಿ ಜಾಕ್ಲೀನ್ ಫೆರ್ನಾಂಡೀಸ್ ಜತೆಗೆ ನಡೆಸಿದ ಟಾಸ್ಕ್‌ವೊಂದರ ವಿಡಿಯೋ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಹಲವು ದಾಖಲೆ ಬರೆದ ವಿಂಡೀಸ್ ನಾಯಕ ಹೋಲ್ಡರ್
2018ರ ಐಪಿಎಲ್ ವೇಳೆ ಜಾಕ್ಲೀನ್, ಆರ್‌ಸಿಬಿ ತಂಡ ತಂಗಿದ್ದ ಹೋಟೆಲ್‌ಗೆ ತೆರಳಿ ಆಟಗಾರರಿಗೆ ಬಗೆ ಬಗೆಯ ಟಾಸ್ಕ್ ನೀಡಿದ್ದರು. ಈ ವೇಳೆ ಬಾಲಿವುಡ್ ನಟಿ ನೀಡಿದ್ದ ಫಿಟ್ನೆಸ್ ಎಕ್ಸ್‌ಸೈಸ್ ಟಾಸ್ಕ್ ಮಾಡಲು ಚಾಹಲ್ ಹರಸಾಹಸ ಪಟ್ಟಿದ್ದರು. ಇದೀಗ ಈ ವಿಡಿಯೋ ಪ್ರಕಟಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
2014 ರಿಂದ ಆರ್‌ಸಿಬಿ ತಂಡದ ಕಾಯಂ ಸದಸ್ಯರಾಗಿರುವ ಚಾಹಲ್, 2018ರಲ್ಲಿ ಆರ್‌ಸಿಬಿ ತಂಡ ಬಿಡುಗಡೆ ಮಾಡಿದ್ದರೂ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕೋಟಾದಡಿ 6 ಕೋಟಿ ರೂಪಾಯಿಗೆ ವಾಪಸ್ ಪಡೆಯಲಾಗಿತ್ತು. ಇದಕ್ಕೂ ಮೊದಲು ಚಾಹಲ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.