3ನೇ ಟೆಸ್ಟ್​ ಸೋಲಲು ಈತನೇ ಕಾರಣ! ಟೀಮ್ ಇಂಡಿಯಾ ಆಟಗಾರನ ವಿರುದ್ಧ ಗವಾಸ್ಕರ್​ ಕಿಡಿ | IND vs ENG

ವಿಜಯವಾಣಿ (1)
Published on

IND vs ENG: ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 22 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಆಂಗ್ಲರು ನೀಡಿದ 193 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ಶುಭಮನ್ ಗಿಲ್​ ಪಡೆ ವಿಫಲವಾಯಿತು. ಅರ್ಧಶತಕ ಮೂಲಕ ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದಿದ್ದ ರವೀಂದ್ರ ಜಡೇಜಾ (61 ಎಸೆತ, 181 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟ ಕಡೆಗೂ ಫಲಿಸಲಿಲ್ಲ.

ಇಂಗ್ಲೆಂಡ್ ಬೌಲರ್‌ಗಳ ಪೈಕಿ ಕ್ಯಾಪ್ಟನ್​ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಬ್ರೈಡನ್ ಕಾರ್ಸೆ ಎರಡು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲುತ್ತಿದ್ದಂತೆ ಪ್ರತಿಕ್ರಿಯಿಸಿದ ಕ್ರಿಕೆಟ್​ ದಿಗ್ಗಜ ಸುನಿಲ್ ಗವಾಸ್ಕರ್, ಕೊಟ್ಟ ಗುರಿಯನ್ನು ಬೆನ್ನತ್ತಲು ಟೀಮ್ ಇಂಡಿಯಾ ಬ್ಯಾಟರ್​​ಗಳ ಎಡವಟ್ಟೇ ಕಾರಣ ಎಂದಿದ್ದಾರೆ.

"ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕನಿಷ್ಠ 60ರಿಂದ 70 ರನ್‌ಗಳ ಕೊಡುಗೆಯನ್ನು ನೀಡಿದ್ದರೆ, ಫಲಿತಾಂಶ ಬೇರೆಯೇ ಆಗ್ತಿತ್ತು. ಆದರೆ, ಟೀಮ್ ಇಂಡಿಯಾ ಬ್ಯಾಟರ್​ಗಳು ಹಾಗೆ ಮಾಡಲಿಲ್ಲ. ಸ್ಪಿನ್ನರ್‌ಗಳಾದ ಜೋ ರೂಟ್ ಮತ್ತು ಶೋಯೆಬ್ ಬಶೀರ್ ಬೌಲಿಂಗ್ ಮಾಡುವಾಗ ಜಡೇಜಾ ಆಕ್ರಮಣಕಾರಿಯಾಗಿ ಆಡಬೇಕಿತ್ತು ಎಂದು ಹಲವರು ಟೀಕಿಸಿದ್ದಾರೆ. ಆದರೆ, ಆ ಸಮಯದಲ್ಲಿ ಜಡೇಜಾ ಆಡಿದ ರೀತಿ ಸರಿಯೇ ಇತ್ತು. ಕಾರಣ, ಅವರೊಂದಿಗೆ ಬ್ಯಾಟಿಂಗ್ ಸಾಥ್​ ಕೊಡಲು ಇನ್ಯಾರು ಇರಲಿಲ್ಲ" ಎಂದಿದ್ದಾರೆ.

"ಇಲ್ಲಿ ಜಡೇಜಾ ಏಕಾಂಗಿ ಹೋರಾಟಕ್ಕೆ ನಾನು ಫುಲ್​ ಮಾರ್ಕ್ಸ್​ಗಳನ್ನು ಕೊಡುತ್ತೇನೆ. ಆದರೆ, ಆತನ ಮಂದಗತಿಯ ಬ್ಯಾಟಿಂಗ್ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ವೇಗವಾಗಿ ಇನ್ನಿಂಗ್ಸ್​ ಆಡಿದಿದ್ದರೆ ಖಂಡಿತ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆಗಳು ಹೆಚ್ಚಿತ್ತು" ಎಂದು ಗವಾಸ್ಕರ್​ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net