ಬ್ಯಾಟಿಂಗ್​ನಲ್ಲಿ ಅದ್ಭುತ, ಸಿಕ್ಸರ್​ಗಳ ಸುರಿಮಳೆ; IPL ಆರಂಭದ ಬೆನ್ನಲ್ಲೇ ಮೈಕಲ್ ಕ್ಲಾರ್ಕ್ ಗುಣಗಾನ | IPL 2O25

ವಿಜಯವಾಣಿ (56)
Published on

IPL 2O25: ಬಹುನಿರೀಕ್ಷಿತ ಐಪಿಎಲ್​ 18ನೇ ಆವೃತ್ತಿಗೆ ನಿನ್ನೆ (ಮಾ.22) ಅಧಿಕೃತ ಚಾಲನೆ ದೊರಕಿದ್ದು, ಶುಭಾರಂಭ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ 7 ವಿಕೆಟ್​ಗಳಿಂದ ಗೆದ್ದು ಬೀಗಿತು. ಈ ಮೂಲಕ ಗೆಲುವಿನ ಖಾತೆಯನ್ನು ತೆರೆಯಿತು. ಇಂದು ಎರಡನೇ ಪಂದ್ಯ ಸನ್​ರೈಸರ್ಸ್​​ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆಯುತ್ತಿದ್ದು, ಎಂದಿನಂತೆ ಅಭಿಮಾನಿಗಳ ಐಪಿಎಲ್​ ಕ್ರೇಜ್​ ಮತ್ತಷ್ಟು ಜೋರಾಗಿದೆ.

ಇನ್ನು ಐಪಿಎಲ್ ಶುರುವಾಗಿದ್ದೇ ತಡ ಮಾಜಿ ಕ್ರಿಕೆಟಿಗರ ಭವಿಷ್ಯವಾಣಿ, ಮೆಚ್ಚುಗೆಯ ನುಡಿಗಳು ಮುನ್ನೆಲೆಗೆ ಬಂದಿವೆ. ಈ ಪೈಕಿ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಮೈಕಲ್ ಕ್ಲಾರ್ಕ್ ಮಾತನಾಡಿ, "ನನ್ನ ಪ್ರಕಾರ, ವಿದೇಶಿ ಆಟಗಾರರಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್​ ಹೆನ್ರಿಚ್​ ಕ್ಲಾಸೆನ್​ ಒಬ್ಬ ಅದ್ಭುತ ಬ್ಯಾಟ್ಸ್​ಮನ್​" ಎಂದು ಹೊಗಳಿದರು.

"2025ರ ಐಪಿಎಲ್​ನಲ್ಲಿ ನನಗೆ ಕ್ಲಾಸೆನ್​ ಅದ್ಭುತ ಸಾಮರ್ಥ್ಯವುಳ್ಳ ಬ್ಯಾಟರ್​ ಎಂದು ಅನಿಸುತ್ತದೆ. ಆತನ ಪವರ್​ ಹಿಟ್ಟಿಂಗ್ ನಿಜಕ್ಕೂ ಗಮನಾರ್ಹ ಹಾಗೂ ಬೌಂಡರಿ ಹೊಡೆಯಲು ಒಳ್ಳೆಯ ಗ್ಯಾಪ್​ ಹುಡುಕುತ್ತಾರೆ. ಮಿಡಲ್ ಓವರ್​ಗಳಲ್ಲಿ ಸಿಕ್ಸರ್​ ಬಾರಿಸುವ ಚಾಣಕ್ಷತನ ಕೂಡ ಅವರಲ್ಲಿದೆ. ತಮ್ಮ ತಂಡದ ಬ್ಯಾಟಿಂಗ್ ಲೈನ್​ಗೆ ಕ್ಲಾಸೆನ್​ ಇಂಧನವಿದ್ದಂತೆ" ಎಂದು ಗುಣಗಾನ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net