ಸ್ಮತಿ ಅರ್ಧಶತಕ ವ್ಯರ್ಥ, ಟಿ20 ಸರಣಿ ಸಮಬಲ: 2ನೇ ಟಿ20ಯಲ್ಲಿ ವೆಸ್ಟ್ ಇಂಡೀಸ್‌ಗೆ ಜಯ

New Project
Published on

ಮುಂಬೈ: ಹಂಗಾಮಿ ನಾಯಕಿ ಸ್ಮತಿ ಮಂದನಾ (62 ರನ್, 41 ಎಸೆತ, 9 ಬೌಂಡರಿ, 1 ಸಿಕ್ಸರ್) ಸಿಡಿಸಿದ ಸತತ ಎರಡನೇ ಅರ್ಧಶತಕದ ಹೊರತಾಗಿಯೂ ಭಾರತ ತಂಡ ಮಹಿಳೆಯರ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರು 9 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1 ರಿಂದ ಸಮಬಲಗೊಂಡಿದೆ.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಉಮಾ ಛೇಟ್ರಿ (4), ಜೆಮೀಮಾ ರೋಡ್ರಿಗಸ್ (13) ಹಾಗೂ ರಾಘವಿ ಬಿಷ್ಟ್ (5) ಬೇಗನೆ ನಿರ್ಗಮಿಸಿದರು. ಆಗ ಸ್ಮತಿ ಮಂದನಾ ಏಕಾಂಗಿ ಹೋರಾಟ ಹಾಗೂ ಕೊನೆಯಲ್ಲಿ ವಿಕೆಟ್ ಕೀಪರ್-ಬ್ಯಾಟುಗಾರ್ತಿ ರಿಚಾ ೋಷ್ (32 ರನ್,17 ಎಸೆತ, 6 ಬೌಂಡರಿ) ಬಿರುಸಿನಾಟದಿಂದ ಭಾರತ 9 ವಿಕೆಟ್‌ಗೆ 159 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

ಪ್ರತಿಯಾಗಿ ಕಿಯಾನಾ ಜೋಸ್ೆ (38) ಒದಗಿಸಿದ ಆರಂಭ ಹಾಗೂ ನಾಯಕಿ ಹ್ಯಾಲೆ ಮ್ಯಾಥ್ಯೂಸ್ (85* ರನ್, 47 ಎಸೆತ, 17 ಬೌಂಡರಿ) ಹೋರಾಟದಿಂದ ವಿಂಡೀಸ್ 15.4 ಓವರ್‌ಗಳಲ್ಲಿ 1 ವಿಕೆಟ್‌ಗೆ 160 ರನ್‌ಗಳಿಸಿ ಸಮಬಲ ಸಾಧಿಸಿತು. ಕಾಯಂ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದರು. ಹರ್ಮಾನ್‌ಪ್ರೀತ್ ಬದಲಿಗೆ ಯುವ ಬ್ಯಾಟುಗಾರ್ತಿ ರಾಘವಿ ಬಿಷ್ಟ್ ಭಾರತ ಪರ ಟಿ20ಗೆ ಪದಾರ್ಪಣೆ ಮಾಡಿದರು.

ಭಾರತ: 9 ವಿಕೆಟ್‌ಗೆ 159 (ಸ್ಮತಿ ಮಂದನಾ 32, ಉಮಾ 4, ಜೆಮೀಮಾ 13, ರಾಘವಿ 5, ದೀಪ್ತಿ 17, ರಿಚಾ 32, ಸಜೀವನ್ 2, ರಾಧಾ 7, ಸೈಮಾ 6, ಡಿಯೇಂಡ್ರಾ ಡಾಟಿನ್ 14ಕ್ಕೆ 2, ಮ್ಯಾಥ್ಯೂಸ್ 36ಕ್ಕೆ 2, ್ಲೆಚರ್ 28ಕ್ಕೆ 2).

ವಿಂಡೀಸ್: 15.4 ಓವರ್‌ಗಳಲ್ಲಿ 1 ವಿಕೆಟ್‌ಗೆ 160 ರನ್ (ಹ್ಯಾಲೆ ಮ್ಯಾಥ್ಯೂಸ್ 85*, ಕಿಯಾನಾ 38, ಕ್ಯಾಂಪ್‌ಬೆಲ್ಲೆ 29*, ಸೈಮಾ 28ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net