ಈ ಕುರಿತು ಹೇಬಾಲ್ ಅಕಾಡೆಮಿಯ ಸಂಸ್ಥಾಪಕರಾದ ಪ್ರಣೀತ್ ಜೆ. ರಾಮಚಂದಾನಿ ಅವರು, "ಭಾರತದಲ್ಲಿ ಕ್ಯೂ-ಸ್ಪೋರ್ಟ್ಸ್ಗಾಗಿ ಬಲವಾದ ಕೋಚಿಂಗ್ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಆಶಯವಾಗಿದೆ. ಈ ಸರ್ಟಿಫಿಕೇಷನ್ ಕೋರ್ಸ್ ಆಧುನಿಕ ಪದ್ಧತಿಗಳು ಮತ್ತು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಪರಿಚಯಿಸಲಿದ್ದು, ಇದು ತರಬೇತುದಾರರು ಮತ್ತು ಆಟಗಾರರ ಬೆಳವಣಿಗೆಗೆ ನಿಜಕ್ಕೂ ಸಹಕಾರಿಯಾಗಿದೆ. ಇದರಿಂದ ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನದ ಗುಣಮಟ್ಟ ಹೆಚ್ಚಲಿದ್ದು, ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಬಲಿಷ್ಠ ಶಕ್ತಿಯಾಗಿ ಬಿಂಬಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದರು.