ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ; ಉಗಾಂಡದಲ್ಲಿ ಪ್ರಥಮ ಸ್ಥಾನ ಪಡೆದ ಗುರುಗುಂಟಾ ಯುವಕ

19092022 Hutti Sharanbasava Sangappa
Published on

ಹಟ್ಟಿಚಿನ್ನದಗಣಿ: ಉಗಾಂಡದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಗುರುಗುಂಟಾದ ಶರಣಬಸವ ಸಂಗಪ್ಪ ಚಿನ್ನದ ಪದಕ ಪಡೆದಿದ್ದಾರೆ.

ಕಡುಬಡ ಕುಟುಂಬದಲ್ಲಿ ಜನಿಸಿ, ತಂದೆ ತಾಯಿಯನ್ನು ಕಳೆದುಕೊಂಡಿರುವ ಶರಣಬಸವ ಅಕ್ಕ, ಭಾವನ ಆಸರೆಯಲ್ಲಿ ಬೆಳೆದಿದ್ದಾರೆ. ಪಿಯುಸಿ ಓದಿರುವ ಇವರು ಕ್ರಿಕೆಟ್ ಪಟುವೂ ಹೌದು. ಗುರುಗುಂಟಾದಲ್ಲಿ ಅಮರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಾ ಸೋಮನಾಥ ನಾಯಕರ ಆರ್‌ಎಸ್‌ಎನ್ ಕ್ಲಬ್‌ನಲ್ಲಿ ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ತರಬೇತಿ ಪಡೆದಿದ್ದಾರೆ.

ಬೆಂಗಳೂರು, ದೆಹಲಿ, ಸೌದಿ ಅರೇಬಿಯಾ ಸೇರಿದಂತೆ ವಿವಿಧೆಡೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜಯಿಸಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಶರಣಬಸವ ಅನ್ಯದೇಶಗಳಿಗೆ ತೆರಳುವ ಅವಕಾಶಗಳಿದ್ದರೂ ಆರ್ಥಿಕ ತೊಂದರೆಗಳಿಂದ ಹೋಗಿರಲಿಲ್ಲ. ಗುರುಗುಂಟಾದಲ್ಲಿ ದಾನಿಗಳ ನೆರವು ಪಡೆದು ಉಗಾಂಡದಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net