ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಹರಿಯಾಣ ಸ್ಟೀಲರ್ಸ್‌ಗೆ ಸತತ 4ನೇ ಗೆಲುವು

New-Project-34
Published on

ಪುಣೆ: ವಿನಯ್ (9) ಆರು ಯಶಸ್ವಿ ರೈಡಿಂಗ್ ಹಾಗೂ ಮೋಹಿತ್ ನಂದಲ್ (5) ಟ್ಯಾಕಲಿಂಗ್ ಅಂಕಗಳ ನೆರವಿನಿಂದ ಹರಿಯಾಣ ಸ್ಟೀಲರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಎದುರು 31-29ರಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಹರಿಯಾಣ ಸ್ಟೀಲರ್ಸ್‌ ಟೂರ್ನಿಯಲ್ಲಿ ಸತತ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಛತ್ರಪತಿ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಪುಣೆ ಚರಣದಲ್ಲಿ ಮಂಗಳವಾರದ ಏಕೈಕ ಪಂದ್ಯದ ಮೊದಲಾರ್ಧದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಆಲೌಟ್ ಮಾಡಿದ ಹರಿಯಾಣ 17-10ರಿಂದ ಮೇಲುಗೈ ಸಾಧಿಸಿತು. ದ್ವಿತೀಯಾರ್ಧದಲ್ಲಿ ತಿರುಗೇಟು ನೀಡುವ ಮೂಲಕ ಕಂಬ್ಯಾಕ್ ಮಾಡಿದ ಗುಜರಾತ್ ತಂಡ 2 ಅಂಕಗಳಿಂದ ವೀರೋಚಿತ ಸೋಲುಂಡಿತು.

ಬುಧವಾರದ ಪಂದ್ಯಗಳು

ಜೈಪುರ-ಯುಪಿ ಯೋಧಾಸ್

ಪುಣೇರಿ ಪಲ್ಟಾನ್-ಬೆಂಗಳೂರು ಬುಲ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net