

ಪಂಚಕುಲ: ದ್ವಿತೀಯಾರ್ಧದಲ್ಲಿಎದುರಾದ ದಿಟ್ಟ ಹೋರಾಟವನ್ನು ಹತ್ತಿಕ್ಕಿದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಹತ್ತನೇ ಆವೃತ್ತಿಯ 124ನೇ ಪಂದ್ಯದಲ್ಲಿಯು ಮುಂಬಾ ತಂಡವನ್ನು 6 ಅಂಕಗಳಿಂದ ಸೋಲಿಸಿತು. ಇದರೊಂದಿಗೆ 13ನೇ ಜಯ ದಾಖಲಿಸಿದ ಹರಿಯಾಣ ಒಟ್ಟು 70 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ4ನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ತೌವ್ ದೇವಿಲಾಲ್ ಒಳಾಂಗಣದಲ್ಲಿಶನಿವಾರ ನಡೆದ ಮೊದಲ ಪಂದ್ಯದಲ್ಲಿಆಲ್‌ರೌಂಡ್ ಪ್ರದರ್ಶನ ನೀಡಿದ ಹರಿಯಾಣ 46-40 ಅಂಕಗಳಿಂದ ಮುಂಬಾಗೆ ಸೋಲುಣಿಸಿತು. ಸತತ ಸೋಲುಗಳಿಂದ ಪ್ಲೇಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿದ್ದ ಮುಂಬಾ, 13ನೇ ಸೋಲಿಗೆ ಗುರಿಯಾಯಿತು.
15 ಅಂಕಗಳ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಹರಿಯಾಣಕ್ಕೆ ಮುಂಬಾ ದಿಟ್ಟ ಸವಾಲು ಒಡ್ಡಿತು. ಸಾಂಘಿಕ ಪ್ರದರ್ಶನ ನೀಡಿದ ಮುಂಬಾ 23ನೇ ನಿಮಿಷದಲ್ಲಿಸ್ಟೀಲರ್ಸ್ ತಂಡವನ್ನು ಆಲೌಟ್ ಮಾಡಿ ಮುಯ್ಯಿ ತೀರಿಸಿಕೊಂಡಿತು. ಜೈ ಭಗ್ವಾನ್, ರೋಹಿತ್ ಯಾದವ್, ಗುಮಾನ್ ಸಿಂಗ್ ಮುಂಬಾ ತಂಡದ ಮರು ಹೋರಾಟದಲ್ಲಿನಿರ್ಣಾಯಕ ಪಾತ್ರವಹಿಸಿದರು.
ಪಂದ್ಯ ಮುಕ್ತಾಯಕ್ಕೆ 10 ನಿಮಿಷಗಳಿರುವಾಗ ಹರಿಯಾಣ ಮತ್ತು ಮುಂಬಾ ತಂಡಗಳಿಂದ 36-31 ಅಂಕಗಳಿಂದ ತೀವ್ರ ಹೋರಾಟ ಕಂಡು ಬಂದಿತು. ಎರಡೂ ತಂಡಗಳು ಕೌಶಲಯುತ ಆಟಕ್ಕೆ ಒತ್ತು ನೀಡಿದವು. 35ನೇ ನಿಮಿಷಕ್ಕೆ ಉಭಯ ತಂಡಗಳ ಅಂತರ ಕೇವಲ 2 (39-37) ಅಂಕಗಳಿಗೆ ತಗ್ಗಿತು. ಅಂತಿಮ ಕ್ಷ ಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಹರಿಯಾಣ 38ನೇ ನಿಮಿಷದಲ್ಲಿತಂಡದ ಮುನ್ನಡೆಯನ್ನು 43-38ಕ್ಕೆ ಹೆಚ್ಚಿಸಿಕೊಂಡಿತಲ್ಲದೆ, ಗೆಲುವನ್ನು ಖಾತರಿಸಿಗೊಳಿಸಿಕೊಂಡಿತು. ಹರಿಯಾಣ ಸ್ಟೀಲರ್ಸ್ ಪರ ವಿಶಾಲ್ ತಾಟೆ 15 ಅಂಕ ಕಲೆಹಾಕಿದರೆ, ನವೀನ್ ಕಂಡು(6), ಶಿವಂ (5) ಮತ್ತು ಘಾನ್‌ಶ್ಯಾಮ್ (6) ತಂಡದ ಗೆಲುವಿಗೆ ಸಾಥ್ ನೀಡಿದರು.
ರೈಡರ್ ವಿಶಾಲ್ ತಾಟೆ ಅವರ ಸೂಪರ್ ಟೆನ್ ಸಾಹಸದಿಂದ ಮಿಂದೆದ್ದ ಹರಿಯಾಣ ಸ್ಟೀಲರ್ಸ್ ತಂಡ ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ 30-15 ಅಂಕಗಳ ಅಂತರದಿಂದ ಮೇಲುಗೈ ಸಾಧಿಸಿತು.
ಹಿಂದಿನ ಪಂದ್ಯದಲ್ಲಿಪಟನಾ ಪೈರೇಟ್ಸ್ ತಂಡವನ್ನು 7 ಅಂಕಗಳಿಂದ ಮಣಿಸಿ ಪ್ಲೇಆಫ್ ಹಂತಕ್ಕೆ 6ನೇ ತಂಡವಾಗಿ ಅರ್ಹತೆ ಗಳಿಸಿರುವ ಹರಿಯಾಣ ಸ್ಟೀಲರ್ಸ್, ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರ ಫಲವಾಗಿ 6ನೇ ನಿಮಿಷದಲ್ಲಿಈಗಾಗಲೇ ಪ್ಲೇಆಫ್ ಅರ್ಹತೆ ಗಳಿಸುವ ಅವಕಾಶದಿಂದ ವಂಚಿತವಾಗಿರುವ ಮಾಜಿ ಚಾಂಪಿಯನ್ಸ್ ಯು ಮುಂಬಾ ತಂಡವನ್ನು ಆಲೌಟ್ ಮಾಡಿದ ಹರಿಯಾಣ ಆಟಗಾರರು, 12-6ರಲ್ಲಿಅಂತರ ಕಾಯ್ದುಕೊಂಡರು.
ಟ್ಯಾಕಲ್ ಮತ್ತು ರೇಡಿಂಗ್ ಎರಡರಲ್ಲೂಎಡವಿದ ಮುಂಬಾ ಮೇಲೆ ಒತ್ತಡ ಮುಂದುವರಿಸುವಲ್ಲಿಯಶಸ್ವಿಯಾದ 15ನೇ ನಿಮಿಷದಲ್ಲಿಮತ್ತೊಮ್ಮೆ ಮುಂಬಾ ತಂಡವನ್ನು ಆಲೌಟ್ ಮಾಡುವ ಮೂಲಕ ತಂಡದ ಅಂತರವನ್ನು 10 ಅಂಕಗಳಿಗೆ ವಿಸ್ತರಿಸಿಕೊಂಡಿತು. ಮುಂಬಾ ಹೋರಾಟ ನಡೆಸಿದರ ವಿರಾಮಕ್ಕೆ 15 ಅಂಕಗಳ ಹಿನ್ನಡೆ ಅನುಭವಿಸಿವಂತಾಯಿತು.
ಫೆಬ್ರವರಿ 18ರಂದು ತಮಿಳ್ ತಲೈವಾಸ್ ಮತ್ತು ಬೆಂಗಾಲ್ ವಾರಿಯರ್ಸ್ ಹಾಗೂ ದಬಾಂಗ್ ದಿಲ್ಲಿಮತ್ತು ಬೆಂಗಳೂರು ಬುಲ್ಸ್ ತಂಡಗಳು ಪೈಪೋಟಿ ನಡೆಸಲಿವೆ.