

ನವದೆಹಲಿ: ಏಪ್ರಿಲ್ 27ರಿಂದ ಮೇ 11ರವರೆಗೆ ಶ್ರೀಲಂಕಾದಲ್ಲಿ ನಿಗದಿಯಾಗಿರುವ ಮಹಿಳೆಯರ ತ್ರಿಕೋನ ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಹರ್ಮಾನ್‌ಪ್ರೀತ್ ಕೌರ್ ನಾಯಕಿಯಾಗಿ ಪುನರಾಗಮನ ಕಂಡಿದ್ದಾರೆ. ಸ್ಮತಿ ಮಂದನಾ ಉಪನಾಯಕಿಯಾಗಿ ಸಾಥ್ ನೀಡಲಿದ್ದಾರೆ. ಆಲ್ರೌಂಡರ್ ಕಾಶ್ವಿ ಗೌತಮ್, ಶ್ರೀಚರಣಿ ಹಾಗೂ ಸುಚಿ ಉಪಾಧ್ಯಾಯ ಚೊಚ್ಚಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.
ವರ್ಷಾರಂಭದಲ್ಲಿ ಐರ್ಲೆಂಡ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಹರ್ಮಾನ್‌ಪ್ರೀತ್ ಡಬ್ಲುೃಪಿಎಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್‌ಗೆ 2ನೇ ಬಾರಿ ಗೆದ್ದು ಕೊಟ್ಟಿದ್ದರು. ಸ್ನೇಹಾ ರಾಣಾ, ಯಸ್ತಿಕಾ ಭಾಟಿಯಾ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ವೇಗಿ ರೇಣುಕಾ ಸಿಂಗ್, ಟಿಟಾಸ್ ಸಾಧು ಗಾಯದಿಂದಾಗಿ ಆಯ್ಕೆಗೆ ಅಲಭ್ಯರಾಗಿದ್ದಾರೆ.
ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಲಿರುವ ಸರಣಿಯಲ್ಲಿ ಭಾರತ, ಆತಿಥೇಯ ಶ್ರೀಲಂಕಾ ಜತೆಗೆ ದಕ್ಷಿಣ ಆಫ್ರಿಕಾ ತಂಡ ಭಾಗವಹಿಸಲಿದೆ. ಏ.27ರಂದು ಶ್ರೀಲಂಕಾ-ಭಾರತ ಉದ್ಘಾಟನಾ ಪಂದ್ಯ ಆಡಲಿದ್ದು, ಅಂಕಪಟ್ಟಿಯ ಅಗ್ರ 2 ತಂಡಗಳು ಮೇ 11ರಂದು ನಿಗದಿಯಾಗಿರುವ ೈನಲ್‌ನಲ್ಲಿ ಎದುರಾಗಲಿವೆ.
ತಂಡ: ಹರ್ಮಾನ್‌ಪ್ರೀತ್ ಕೌರ್ (ನಾಯಕ), ಸ್ಮತಿ ಮಂದನಾ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮೀಮಾ ರೋಡ್ರಿಗಸ್, ರಿಚಾ ೋಷ್ (ವಿ.ಕೀ), ಯಸ್ತಿಕಾ ಭಾಟಿಯಾ (ವಿ.ಕೀ), ದೀಪ್ತಿ ಶರ್ಮ, ಅಮನ್‌ಜೋತ್ ಕೌರ್, ಕಾಶ್ವಿ ಗೌತಮ್, ಸ್ನೇಹ ರಾಣಾ, ಆರುಂಧತಿ ರೆಡ್ಡಿ, ತೆಜಲ್ ಹನ್ಸ್‌ಬಿನ್ಸ್, ಶ್ರೀಚರಣಿ, ಸುಚಿ ಉಪಾಧ್ಯಾಯ.