ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡದ ಪ್ರಕಟ: ಸ್ಮತಿ ಮಂದನಾ ಸಾರಥ್ಯ

New Project
Published on

ನವದೆಹಲಿ: ಜನವರಿ 10ರಂದು ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಪ್ರವಾಸಿ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಮಹಿಳಾ ಏಕದಿನ ಸರಣಿಗೆ ಸ್ಮತಿ ಮಂದನಾ ಆತಿಥೇಯ ಭಾರತ ತಂಡದ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಕಾಯಂ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಹಾಗೂ ವೇಗಿ ರೇಣುಕಾ ಸಿಂಗ್‌ಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆಲ್ರೌಂಡ್ ದೀಪ್ತಿ ಶರ್ಮ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಮಂಡಿನೋವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ 35 ವರ್ಷದ ಹರ್ಮಾನ್‌ಪ್ರೀತ್, ಪದೇಪದೆ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದರಿಂದ ಬ್ರೇಕ್ ಪಡೆದಿದ್ದಾರೆ ಎನ್ನಲಾಗಿದೆ. ಜ.12,15 ರಂದು ಕ್ರಮವಾಗಿ ಸರಣಿಯ 2, 3ನೇ ಪಂದ್ಯ ನಡೆಯಲಿವೆ.

ತಂಡ: ಸ್ಮತಿ ಮಂದನಾ (ನಾಯಕಿ), ದೀಪ್ತಿ ಶರ್ಮ (ಉಪನಾಯಕಿ), ಪ್ರತೀಕಾ ರಾವ್, ಹರ್ಲಿನ್ ಡಿಯೋಲ್, ಜೆಮೀಮಾ ರೋಡ್ರಿಗಸ್, ಉಮಾ ಚೇಟ್ರಿ (ವಿ.ಕೀ), ರಿಚಾ ೋಷ್ (ವಿ.ಕೀ), ತೇಜಲ್ ಹಸಬೈನ್ಸ್, ರಾಘವಿ ಬಿಷ್ತ್, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ಟಿಟಾಸ್ ಸಧು, ಸೈಮಾ ಠಾಕೂರ್ ಹಾಗೂ ಸಯಾಲಿ ಸತ್ಗರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net