ಅಂಪೈರ್ ನಿರ್ಣಯಕ್ಕೆ ಸಿಟ್ಟಿಗೆದ್ದು ಸ್ಟಂಪ್ಸ್​ಗೆ ಬ್ಯಾಟ್‌ನಿಂದ ಹೊಡೆದ ಹರ್ಮನ್‌ಪ್ರೀತ್ ಕೌರ್; ವಿಡಿಯೋ ವೈರಲ್​

Untitled design - 2023-07-23T153459.814
Published on

ಭಾರತ: ಭಾರತದ ಮಹಿಳಾ ಕ್ರಿಕೆಟ್ ತಂಡವು ಪ್ರಸ್ತುತ ಜುಲೈ 22 ರಂದು ಢಾಕಾದಲ್ಲಿ ನಡೆದ ಮೂರನೇ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಪಂದ್ಯವಾಡಿತು. ಈ ವೇಳೆ ಬ್ಯಾಟಿಂಗ್​ ಮಾಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ ಎಲ್​​ಬಿಡಬ್ಲ್ಯೂ ಆದ ಕಾರಣ ಅಂಪೈರ್​ ಔಟ್​​ ಎಂದು ಘೋಷಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಅವರು ಬ್ಯಾಟ್​ನಿಂದ ಸ್ಟಂಪ್ಸ್​ ಅನ್ನು ಹೊಡೆದ ವಿಡಿಯೋ ಇದೀಗ ಭಾರೀ ವೈರಲ್​ ಆಗಿದೆ.

ಸ್ವೀಪ್ ಶಾಟ್‌ ಹೊಡೆಯಲು ಯತ್ನಿಸಿದಾಗ ಅವರ ಲೆಗ್​ ಪ್ಯಾಡ್​​ಗೆ ಬಾಲ್​ ಟಚ್​ ಆಗಿದೆ. ಇದನ್ನು ನೋಡಿದ ಆನ್‌ಫೀಲ್ಡ್ ಅಂಪೈರ್ ಔಟ್​ ಎಂದು ಹೇಳಿದರು. ಈ ನಿರ್ಧಾರದಿಂದ ತೀವ್ರ ಆಕ್ರೋಶಕ್ಕೆ ತುತ್ತಾದ ಹರ್ಮನ್​ಪ್ರೀತ್​, ತಮ್ಮ ಬ್ಯಾಟನ್ನು ಹಿಂದೆಯಿದ್ದ ಸ್ಟಂಪ್ಸ್​ಗೆ ಬೀಸಿ ಹೊಡೆಯುವ ಮೂಲಕ ಕೋಪವನ್ನು ಪ್ರದರ್ಶಿಸಿದ್ದಾರೆ. ಸ್ಥಳದಲ್ಲಿದ್ದ ಅಂಪೈರ್​ ಹರ್ಮನ್​ ಪ್ರೀತ್​ ಕೌರ್​​ ಅವರ ನಡೆಯನ್ನು ಖಂಡಿಸಿದ್ದಾರೆ. ಕೆಲ ಸಮಯ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅವರು ಪೆವಿಲಿಯನ್​ ಕಡೆ ತೆರಳಿದ್ದಾರೆ.

ಸದ್ಯ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಕೆಲವರು ಹರ್ಮನ್​ ಪ್ರೀತ್​ ಕೌರ್​ಗೆ ಬೆಂಬಲ ಸೂಚಿಸಿದರೆ, ಇನ್ನು ಕೆಲವರು ತಾಳ್ಮೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net