ಸ್ನೇಹಾ ರಾಣಾ ತಲೆಗೆ ಪೆಟ್ಟು: ಕನ್‌ಕಷನ್ ಬದಲಿ ಆಟಗಾರ್ತಿಯಾಗಿ ಹರ್ಲೀನ್ ಡಿಯೋಲ್‌ಗೆ ಸ್ಥಾನ

New-Project-62
Published on

ಮುಂಬೈ: ವಿಕೆಟ್ ಕೀಪರ್-ಬ್ಯಾಟುಗಾರ್ತಿ ರಿಚಾ ೋಷ್ (96 ರನ್, 117 ಎಸೆತ, 13 ಬೌಂಡರಿ) ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 3 ರನ್‌ಗಳಿಂದ ವೀರೋಚಿತ ಸೋಲು ಕಂಡಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಬಳಗ 3 ಪಂದ್ಯಗಳ ಸರಣಿಯಲ್ಲಿ 0-2ರಿಂದ ಸೋಲು ಅನುಭವಿಸಿದೆ.

ಸ್ನೇಹಾ ರಾಣಾ ತಲೆಗೆ ಪೆಟ್ಟು: ಪಂದ್ಯದ 25ನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಭಾರತದ ಸ್ನೇಹಾ ರಾಣಾ ಹಾಗೂ ಪೂಜಾ ವಸಾಕರ್ ಪರಸ್ಪರ ಡಿಕ್ಕಿಯಾದರು. ಇದರಿಂದಾಗಿ ಸ್ನೇಹಾ ರಾಣಾ ತಲೆಯ ಎಡಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತು. ಕೆಲ ನಿಮಿಷ ಅಂಗಣದಲ್ಲಿ ಕುಸಿದು ಬಿದ್ದ ಸ್ನೇಹಾ ನಂತರ ಫಿಸಿಯೋ ಸಹಾಯದಿಂದ ಪೆವಿಲಿಯನ್‌ಗೆ ತೆರಳಿದರು. ನಂತರ ತಲೆ ನೋವು ಹಾಗೂ ವಾಂತಿ ಮಾಡಿಕೊಂಡಿದ್ದರಿಂದ ಸ್ನೇಹಾರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇವರ ಬದಲಿಗೆ ಕನ್‌ಕಷನ್ ಬದಲಿ ಆಟಗಾರ್ತಿಯಾಗಿ ಹರ್ಲೀನ್ ಡಿಯೋಲ್ ಸ್ಥಾನ ಪಡೆದರು. ಮಹಿಳೆಯರ ಏಕದಿನದಲ್ಲಿ ಮೊದಲ ಬಾರಿಗೆ ಕನ್‌ಕಷನ್ ಬದಲಿ ಆಟಗಾರ್ತಿ ಸ್ಥಾನ ಪಡೆದ ದೃಷ್ಟಾಂತ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net