2024ರ ಐಪಿಎಲ್‌ವರೆಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಡುವುದು ಅನುಮಾನ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಡೌಟ್!

New-Project-4
Published on

ನವದೆಹಲಿ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2024ರ ಐಪಿಎಲ್ ಟೂರ್ನಿಗೂ ಮುನ್ನ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದು ಅನುಮಾನ ಎನ್ನಲಾಗಿದೆ. ಆಸೀಸ್ ವಿರುದ್ಧ ಟಿ20 ಸರಣಿಯಿಂದ ಹೊರಗುಳಿದಿರುವ ಪಾಂಡ್ಯ ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಬಲಗಾಲಿನ ಪಾದ ಗಾಯಕ್ಕೆ ತುತ್ತಾಗಿದ್ದ ಪಾಂಡ್ಯ ಟೂರ್ನಿಯಿಂದಲೇ ಹೊರಬಿದಿದ್ದರು. ಸದ್ಯ ಪುನಶ್ಚೇತನ ಶಿಬಿರದಲ್ಲಿರುವ ಪಾಂಡ್ಯ, ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಗೆ ಸಂಪೂರ್ಣ ಫಿಟ್ ಆಗುವುದು ಅನುಮಾನ ಮೂಡಿಸಿದೆ. ಸಂಪೂರ್ಣವಾಗಿ ಫಿಟ್ನೆಸ್ ಪಡೆಯಲು ದೀರ್ಘ ಸಮಯ ಹಿಡಿಯಲಿದೆ ಎನ್ನಲಾಗಿದೆ. 2024ರ ಐಪಿಎಲ್ ಟೂರ್ನಿಗೆ ಫಿಟ್ ಆಗಿ ಮರಳುವ ಸಾಧ್ಯತೆಗಳಿವೆ.

ಟೀಮ್ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿರದ 30 ವರ್ಷದ ಪಾಂಡ್ಯ, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದ್ದು, ತವರಿನಲ್ಲಿ ನಡೆಯಲಿರುವ ಅ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net