ತಂದೆಯಾದ ಬೆನ್ನಲ್ಲೇ ಭಾರಿ ಟ್ರೋಲ್​ ಆದ ಹಾರ್ದಿಕ್​ ಪಾಂಡ್ಯ

hardik 27
Published on

ಬೆಂಗಳೂರು: ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅಪ್ಪನಾದ ಸಂಭ್ರಮವನ್ನು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳಿಂದ ಭರ್ಜರಿ ಟ್ರೋಲ್​ಗಳಿಗೂ ಒಳಗಾಗಿದ್ದಾರೆ. 26 ವರ್ಷದ ಹಾರ್ದಿಕ್​ ಪಾಂಡ್ಯ ಜನವರಿ 1ರಂದು ನತಾಶಾ ಸ್ಟಾಂಕೋವಿಕ್​ ಜತೆಗೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಅದಾಗಿ 7 ತಿಂಗಳಲ್ಲೇ ತಂದೆಯಾಗಿರುವ ಅವರ ವೇಗ, ಅವರ ಬ್ಯಾಟಿಂಗ್​ನಷ್ಟೇ ಸ್ಫೋಟಕವಾಗಿದೆ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.

ಲಾಕ್​ಡೌನ್​ ನಡುವೆ ಮೇ ತಿಂಗಳಲ್ಲಿ ಹಾರ್ದಿಕ್​ ಪಾಂಡ್ಯ, ನತಾಶಾ ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಪಡಿಸಿ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದರು. ಇದಕ್ಕೂ ಮುನ್ನ ಅವರು ಸರಳವಾಗಿ ವಿವಾಹವಾಗಿದ್ದರು ಎನ್ನಲಾಗುತ್ತಿದೆ. ಇದಾಗಿ ಅದಾಗಿ ಎರಡೇ ತಿಂಗಳಲ್ಲಿ ಮಗುವಿನ ಜನನದ ವಿಷಯವನ್ನೂ ಹಾರ್ದಿಕ್​ ಪಾಂಡ್ಯ ಹಂಚಿಕೊಂಡಿರುವುದು ಅಭಿಮಾನಿಗಳಿಗೆ ಮತ್ತಷ್ಟು ಅಚ್ಚರಿ ತಂದಿದೆ.

ಪಾಂಡ್ಯ ಇಷ್ಟೊಂದು ಬೇಗನೆ ಅಪ್ಪನಾಗಿರುವ ವಿಷಯವನ್ನು ಕೇಳಿದ ಬೆನ್ನಲ್ಲೇ ಅಭಿಮಾನಿಗಳು ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮ ದಂಪತಿ ಮತ್ತು ಯುವರಾಜ್​ ಸಿಂಗ್​ ಅವರನ್ನೂ ಹಾರ್ದಿಕ್​ ಪಾಂಡ್ಯರ ಟ್ರೋಲ್​ಗಳಿಗೆ ಬಳಸಿಕೊಂಡಿದ್ದಾರೆ. ಟಿ20 ಕ್ರಿಕೆಟ್​ನ ನಿಜವಾದ ರಾಯಭಾರಿ ಎಂದು ಹಾರ್ದಿಕ್​ ಪಾಂಡ್ಯ ನಿರೂಪಿಸಿದ್ದಾರೆ ಎಂದೂ ಟ್ರೋಲ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net