

ನವದೆಹಲಿ: ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಿಂದ ವರ್ಗಾವಣೆ ಆಗುವುದು ಬಹುತೇಕ ಖಚಿತಗೊಂಡಿದೆ. ಭಾನುವಾರ ಸ್ವತಃ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೂಡ ಇದರ ಸ್ಪಷ್ಟ ಸುಳಿವು ಬಿಟ್ಟುಕೊಟ್ಟಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಶುಭಾಶಯದ ಸಂದೇಶದಿಂದ ಹಾರ್ದಿಕ್ ಪಾಂಡ್ಯ ಚಿತ್ರವನ್ನು ಕೈಬಿಡಲಾಗಿದೆ. ಈ ಪೋಸ್ಟ್ನಲ್ಲಿ ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮ, ಸೂರ್ಯಕುಮಾರ್, ನಮನ್ ಧೀರ್ ಜತೆಗೆ ಮಹಿಳಾ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್ ಮತ್ತಿತರರ ಚಿತ್ರಗಳಿವೆ. ಆದರೆ ಕಳೆದ 2 ಆವೃತ್ತಿಗಳಲ್ಲಿ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನೇ ಕೈಬಿಡಲಾಗಿದೆ.
ಇದು ಹಾರ್ದಿಕ್ ವರ್ಗಾವಣೆ ಆಗುತ್ತಿರುವ ಖಚಿತ ಸಂದೇಶ ಎನ್ನಲಾಗಿದೆ. ಮುಂಬೈ-ಪಂಜಾಬ್ ಕಿಂಗ್ಸ್ ತಂಡಗಳ ವರ್ಗಾವಣೆ ಒಪ್ಪಂದ ಬಹುತೇಕ ಅಂತಿಮವಾಗಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ. ಜತೆಗೆ ಹಾರ್ದಿಕ್ ಮತ್ತು ಅರ್ಷದೀಪ್ ನಡುವಿನ ವರ್ಗಾವಣೆಯ ಮೊತ್ತದ ಬಗ್ಗೆ ಮಾತ್ರ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಾಗಿದೆ.