ಹಾರ್ದಿಕ್ ಪಾಂಡ್ಯಗೆ ಮೋಸ ಮಾಡಿದ ಸಹೋದರ ವೈಭವ್ ಪಾಂಡ್ಯ ಅರೆಸ್ಟ್​

Hardik Pandya
Published on

ಹಾರ್ದಿಕ್ ಪಾಂಡ್ಯ ಮಲತಾಯಿ ಮಗ, ಸಹೋದರ ವೈಭವ್ ಪಾಂಡ್ಯ. ಫೋರ್ಜರಿ ಮೂಲಕ ಸುಮಾರು ರೂ.4.3 ಕೋಟಿ ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪದ ಹಿನ್ನೆಲೆಯಲ್ಲಿ ವೈಭವ್ ಪಾಂಡ್ಯ ಅವರನ್ನು ಬಂಧಿಸಲಾಗಿದೆ.

ನವದೆಹಲಿ:ಕ್ರಿಕೆಟರ್​ ಹಾರ್ದಿಕ್ ಪಾಂಡ್ಯ ಸಹೋದರ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ವೈಭವ್ ಪಾಂಡ್ಯ ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ಸಹೋದರ. ಈ ಮೂವರು ಒಟ್ಟಾಗಿ 2021 ರಲ್ಲಿ ಪಾಲಿಮರ್ ವ್ಯವಹಾರವನ್ನು ಪ್ರಾರಂಭಿಸಿದರು. ಹಾರ್ದಿಕ್ ಮತ್ತು ಕೃನಾಲ್ ತಲಾ 40 ಪ್ರತಿಶತ ಮತ್ತು ವೈಭವ್ 20 ಪ್ರತಿಶತದೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿದರು.

ಈ ಮೂರು ಹಾಕಿರುವ ಹೂಡಿಕೆಯ ಪ್ರಕಾರ, ವ್ಯವಹಾರದ ಲಾಭವನ್ನು ಹಂಚಿಕೊಳ್ಳಬೇಕು. ಆದರೆ.. ವೈಭವ್ ತನ್ನ ಇಬ್ಬರು ಸಹೋದರರಿಗೆ ತಿಳಿಯದಂತೆ ರೂ.4.3 ಕೋಟಿ ಹಣವನ್ನು ಬೇರೆಡೆಗೆ ತಿರುಗಿಸಿದ್ದಾನೆ. ಈ ಹಣದಿಂದ ಮತ್ತೊಂದು ಕಂಪನಿಯನ್ನು ಪ್ರಾರಂಭಿಸಿದ್ದಾನೆ. ವೈಭವ್ ತನ್ನ ಲಾಭದ ಮಾರ್ಜಿನ್ ಅನ್ನು ಗುಟ್ಟಾಗಿ 20 ರಿಂದ 33.3% ಕ್ಕೆ ಹೆಚ್ಚಿಸಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯಗೆ ಸಾಕಷ್ಟು ಆರ್ಥಿಕ ನಷ್ಟಕ್ಕೆ ಕಾರಣವಾಯಿತು.

ವೈಭವ್ ಅವರು ಹಾರ್ದಿಕ್ ಮತ್ತು ಕೃನಾಲ್ ಅವರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ ಆತನ ವಿರುದ್ಧ ವಂಚನೆ ಮತ್ತು ಫೋರ್ಜರಿ ಪ್ರಕರಣಗಳು ದಾಖಲಾಗಿದ್ದವು.

ಹಾರ್ದಿಕ್ ಮತ್ತು ಕೃನಾಲ್ ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕ. ಅವರ ನಾಯಕತ್ವದಲ್ಲಿ ಮುಂಬೈ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳಲ್ಲಿ ಸೋತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿ ಮುಂದುವರಿದಿದೆ. ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ಪ್ರತಿನಿಧಿಸುತ್ತಾರೆ. ಲಕ್ನೋ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ. ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net