VIDEO | ಧೋನಿ ಬರ್ತ್‌ಡೇಗೆ ಅಚ್ಚರಿ ನೀಡಲು ರಾಂಚಿಗೆ ಹೋದ ಪಾಂಡ್ಯ ಬ್ರದರ್ಸ್‌!

pandya brothers
Published on

ರಾಂಚಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜನ್ಮದಿನಕ್ಕೆ ಅವರ ಅಭಿಮಾನಿಗಳೆಲ್ಲರೂ ಮಂಗಳವಾರ ಸಂಭ್ರಮಿಸಿದರು. ಚೆನ್ನೈ ಸೂಪರ್‌ಕಿಂಗ್ಸ್‌ನ ಅವರ ಸಹ-ಆಟಗಾರ ಡ್ವೇಯ್ನ ಬ್ರಾವೊ ಹಾಡೊಂದನ್ನು ಬಿಡುಗಡೆ ಮಾಡಿ ಧೋನಿ ಬರ್ತ್‌ಡೇಗೆ ವಿಶೇಷವಾದ ಉಡುಗೊರೆ ನೀಡಿದ್ದರು. ಭಾರತ ತಂಡದ ಆಲ್ರೌಂಡರ್‌ಗಳಾದ ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಇನ್ನೂ ವಿಶೇಷವಾಗಿ ಧೋನಿಗೆ ಬರ್ತ್‌ಡೇ ಸಪ್ರೈಸ್ ನೀಡಿದ್ದಾರೆ. ಅದೇನು ಗೊತ್ತೇ?

ಈ ವಿಶೇಷ ದಿನದಂದು ಧೋನಿಗೆ ಅಚ್ಚರಿ ನೀಡಬೇಕೆಂಬ ಕಾರಣಕ್ಕಾಗಿ ಪಾಂಡ್ಯ ಸಹೋದರರು ಕರೊನಾ ವೈರಸ್ ಭೀತಿಯ ನಡುವೆಯೂ ರಾಂಚಿಗೆ ಪ್ರಯಾಣಿಸಿದ್ದಾರೆ. ಕಳೆದ ವರ್ಷದ ವಿಶ್ವಕಪ್ ಬಳಿಕ ಅಂದರೆ ಕಳೆದ ಜುಲೈನಿಂದಲೂ ಧೋನಿಯನ್ನು ಭೇಟಿಯಾಗದೇ ಇದ್ದ ಹಾರ್ದಿಕ್ ಪಾಂಡ್ಯ ಕಳೆದ ರಾತ್ರಿ ಮೊದಲಿಗರಾಗಿ ಧೋನಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದರು. ಅವರು ಧೋನಿಗೆ ಅತ್ಯಂತ ಆಪ್ತರಾದವರು ಮತ್ತು ಧೋನಿ ನೀಡಿದ ಉಪಯುಕ್ತ ಸಲಹೆಗಳು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ನೆರವಾಗಿದೆ ಎಂದು ಈ ಹಿಂದೆ ಹೇಳಿದ್ದರು. ಧೋನಿ ಅವರನ್ನು ರಾಂಚಿಯ ಮನೆಯಲ್ಲಿ ಭೇಟಿಯಾಗಿ ಅಚ್ಚರಿ ನೀಡುವ ಅವರ ಯೋಜನೆಗೆ ಅಣ್ಣ ಕೃನಾಲ್ ಪಾಂಡ್ಯ ಕೂಡ ಸಾಥ್ ನೀಡಿದ್ದಾರೆ.

ಮಂಗಳವಾರ ವಡೋದರದಿಂದ ರಾಂಚಿಗೆ ಪ್ರಯಾಣಿಸಿದ ಪಾಂಡ್ಯ ಸಹೋದರರು, ಬುಧವಾರವೇ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಅವರಿಬ್ಬರು ರಾಂಚಿಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಡಿಯೋವನ್ನು ಧೋನಿ ಅವರ ್ಯಾನ್ ಕ್ಲಬ್‌ನ ಇನ್‌ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮಾಸ್ಕ್ ಧರಿಸಿ ರಾಂಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕಾರಿನ ಮೂಲಕ ಧೋನಿ ಮನೆಗೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net