ಮೂವರು ಸ್ಟಾರ್ ಆಟಗಾರರನ್ನು ಅಂತಿಮಗೊಳಿಸಿದ ಅಹಮದಾಬಾದ್ ಫ್ರಾಂಚೈಸಿ

ahamadabad franchies for web
Published on

ನವದೆಹಲಿ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಹಾಗೂ ಯುವ ಬ್ಯಾಟರ್ ಶುಭಮಾನ್ ಗಿಲ್ ಜತೆ ನೂತನ ಫ್ರಾಂಚೈಸಿ ಅಹಮದಾಬಾದ್ ತಂಡ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಕೆಲದಿನಗಳಿಂದ ಹಾರ್ದಿಕ್ ಪಾಂಡ್ಯ ಅಹಮದಾಬಾದ್ ತಂಡ ಸೇರ್ಪಡೆ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ. ಇದಕ್ಕೂ ಮೊದಲು ಇಶಾನ್ ಕಿಶನ್ ತಂಡ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಇಶಾನ್ ಬದಲಿಗೆ ಶುಭಮಾನ್ ಗಿಲ್‌ಗೆ ಮಣೆಹಾಕಲಾಗಿದೆ.

ಹಾರ್ದಿಕ್ ಪಾಂಡ್ಯ ಹಾಗೂ ರಶೀದ್ ಖಾನ್‌ಗೆ ತಲಾ 15 ಕೋಟಿ ರೂಪಾಯಿ ಹಾಗೂ ಗಿಲ್‌ಗೆ 7 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ತಂಡ ಮುನ್ನಡೆಸುವ ಸಾಧ್ಯತೆಗಳಿವೆ. ‘ಅಹಮದಾಬಾದ್ ಮೂವರು ಆಟಗಾರರನ್ನು ಅಂತಿಮಗೊಳಿಸಿದ್ದು, ಹಾರ್ದಿಕ್, ರಶೀದ್ ಹಾಗೂ ಶುಭಮಾನ್ ಗಿಲ್ ತಂಡದ ಮೊದಲ ಆಯ್ಕೆಯಾಗಿದ್ದಾರೆ’ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ಅಹಮದಾಬಾದ್ ತಂಡ ಈಗಾಗಲೇ ಭಾರತ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ, ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರ ವಿಕ್ರಮ್ ಸೋಲಂಕಿ ಒಳಗೊಂಡ ಸಹಾಯಕ ಸಿಬ್ಬಂದಿಯನ್ನು ನೇಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net