ಕ್ರಿಕೆಟ್ ಆಡಳಿತಕ್ಕಿಂತ ಆಡುವುದು ಕಠಿಣ!

Sourav Ganguly
Published on

ಮುಂಬೈ: ಕ್ರಿಕೆಟ್ ಆಡಳಿತಕ್ಕಿಂತ ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುವುದು ಕಠಿಣ ಸವಾಲು ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

‘ಒತ್ತಡದಲ್ಲಿ ಆಡುವುದು ಕಷ್ಟ. ಯಾಕೆಂದರೆ ಬ್ಯಾಟಿಂಗ್ ವೇಳೆ ಒಂದೇ ಅವಕಾಶ ಸಿಗುತ್ತದೆ. ಗ್ಲೆನ್ ಮೆಕ್​ಗ್ರಾಥ್​ರ ಔಟ್​ಸೈಡ್ ಆಫ್​ಸ್ಟಂಪ್ ಎಸೆತ ಎಡ್ಜ್ ಮಾಡಿದರೆ ಔಟಾಗಿ ಬಿಡುತ್ತೇವೆ. ಆದರೆ ಆಡಳಿತದಲ್ಲಿ ತಪ್ಪೆಸಗಿದರೆ ಅದನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುತ್ತದೆ’ ಎಂದು ಗಂಗೂಲಿ ಹೇಳಿದ್ದಾರೆ. 2014ರಲ್ಲಿ ಬಿಸಿಸಿಐಗೆ ತಾತ್ಕಾಲಿಕ ಅಧ್ಯಕ್ಷರಾಗಿದ್ದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಕೂಡ ಕ್ರಿಕೆಟ್ ಆಟಕ್ಕಿಂತ ಆಡಳಿತ ಸುಲಭ ಎಂದು ಗಂಗೂಲಿ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net