ಕರ್ನಾಟಕಕ್ಕೆ ಮಣಿದ ಏಷ್ಯಾಡ್ ಕ್ರಿಕೆಟ್ ತಂಡ: ಮನೀಷ್ ಪಾಂಡೆ ಅರ್ಧಶತಕ

New-Project-24-1
Published on

ಬೆಂಗಳೂರು: ಏಷ್ಯನ್ ಗೇಮ್ಸ್‌ಗೆ ತೆರಳಲಿರುವ ಭಾರತದ ಯುವ ಕ್ರಿಕೆಟಿಗರ ತಂಡ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡದ ಎದುರು 6 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಗೈರಿನಲ್ಲಿ ಕಣಕ್ಕಿಳಿದ ಭಾರತ ಮೊದಲು ಬ್ಯಾಟಿಂಗ್ ನಡೆಸಿ, ಆಲ್ರೌಂಡರ್ ಮನೋಜ್ ಭಾಂಡಗೆ (15ಕ್ಕೆ 4) ಬಿಗಿ ದಾಳಿ ಎದುರು ಭರ್ತಿ 20 ಓವರ್‌ಗಳಲ್ಲಿ 133ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಮನೀಷ್ ಪಾಂಡೆ (52*) ಅರ್ಧಶತಕದ ನೆರವಿನಿಂದ ಕರ್ನಾಟಕ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 136 ರನ್ ಕಲೆಹಾಕಿ ಜಯಿಸಿತು.

ಭಾರತ ಪರ ಯಶಸ್ವಿ ಜೈಸ್ವಾಲ್ (31) ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ (49) ಉತ್ತಮ ಆರಂಭ ಒದಗಿಸಿದರು. ಬಳಿಕ ಕರ್ನಾಟಕದ ಸಂಘಟಿತ ದಾಳಿಗೆ ದಿಢೀರ್ ಕುಸಿತ ಕಂಡಿತು. ರಾಹುಲ್ ತ್ರಿಪಾಠಿ(6), ಜಿತೇಶ್ ಶರ್ಮ (2), ರಿಂಕು ಸಿಂಗ್ (5) ಹಾಗೂ ಶಿವಂ ದುಬೆ (0) ಒಂದಂಕಿ ಮೊತ್ತಕ್ಕೆ ತೃಪ್ತಿ ಪಟ್ಟರು.

ಭಾರತ: 20 ಓವರ್‌ಗಳಲ್ಲಿ 133 ( ಜೈಸ್ವಾಲ್ 31, ಪ್ರಭ್‌ಸಿಮ್ರಾನ್ 49, ತ್ರಿಪಾಠಿ 6, ರಿಂಕು 5, ಮನೋಜ್ 15ಕ್ಕೆ4, ಶುಭಾಂಗ್ 17ಕ್ಕೆ3, ವಿ. ಕೌಶಿಕ್ 36ಕ್ಕೆ3).

ಕರ್ನಾಟಕ: 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 136 ( ಮಯಾಂಕ್ 19, ಎಲ್‌ಆರ್ ಚೇತನ್ 29, ಅಭಿನವ್ 17,ಮನೀಷ್ 52*, ಕಿಶೋರ್ 20ಕ್ಕೆ1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net