

ದುಬೈ: ಭಾರತ ತಂಡದ ವೇಗಿ ಗುರ್ನೂರ್ ಬ್ರಾರ್‌ಗೆ ಐಸಿಸಿ ಛೀಮಾರಿ ಹಾಕಿದ್ದು, ಒಂದು ಡಿಮೆರಿಟ್ ಅಂಕವನ್ನೂ ನೀಡಿದೆ. ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಟಿಮ್ ಸೈರ್ಟ್ ವಿಕೆಟ್ ಪಡೆದು ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಕ್ಕೆ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಪಂದ್ಯದ 12ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಗುರ್ನೂರ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಉಲ್ಲಂಸಿದ್ದಾರೆ. ಗುರ್ನೂರ್ ಅವರ ಸಂಭ್ರಮಾಚರಣೆ ಎದುರಾಳಿ ತಂಡದ ಆಟಗಾರರಿಗೆ ಆಕ್ರಮಣಕಾರಿ ವರ್ತನೆಗೆ ಪ್ರಚೋದನೆ ನೀಡುವಂತಿತ್ತು ಎಂದು ಐಸಿಸಿ ತಿಳಿಸಿದೆ. ಇಬ್ಬರು ಆಟಗಾರರ ನಡುವೆ ಈ ಮುನ್ನ ಮಾತಿನ ಚಕಮಕಿಯೂ ನಡೆದಿತ್ತು.