

ಬೆಂಗಳೂರು: ನಾಯಕ ವೈಶಾಕ್ ವಿಜಯ್ ಕುಮಾರ್ (31ಕ್ಕೆ 2), ಅಭಿಲಾಷ್ ಶೆಟ್ಟಿ (20ಕ್ಕೆ 2) ಮತ್ತು ಅಮಿತ್ ವರ್ಮ (13ಕ್ಕೆ 2) ಸಂಟಿತ ಬೌಲಿಂಗ್ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯಲ್ಲಿ ನಡೆದ ಭಾನುವಾರದ 2ನೇ ಪಂದ್ಯದಲ್ಲಿ ಮಂಗಳೂರು ಡ್ರಾ$ಗನ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಮಂಗಳೂರು ತಂಡ 9 ವಿಕೆಟ್ಗೆ 120 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಗುಲ್ಬರ್ಗಾ ತಂಡ ಆರ್. ಸ್ಮರಣ್ (62*) ಅರ್ಧಶತಕದಾಟದಿಂದ 17.1 ಓವರ್ಗಳಲ್ಲಿ 5 ವಿಕೆಟ್ಗೆ 121 ರನ್ ಗಳಿಸಿ ಜಯಿಸಿತು.
ಮಂಗಳೂರು ಡ್ರಾ$ಗನ್ಸ್: 9 ವಿಕೆಟ್ಗೆ 120 (ಕೆವಿ ಸಿದ್ಧಾರ್ಥ್ 8, ಬಿಆರ್ ಶರತ್ 7, ಎಂಜಿ ನವೀನ್ 19, ಗೌರವ್ ಧಿಮನ್ 27, ಆದಿತ್ಯಾ 22*, ಅಭಿಲಾಷ್ ಶೆಟ್ಟಿ 20ಕ್ಕೆ 2, ವೈಶಾಕ್ 31ಕ್ಕೆ 2, ಅಮಿತ್ ವರ್ಮ 13ಕ್ಕೆ 2), ಗುಲ್ಬರ್ಗಾ ಮಿಸ್ಟಿಕ್ಸ್: 17.1 ಓವರ್ಗಳಲ್ಲಿ 5 ವಿಕೆಟ್ಗೆ 121 (ಎಲ್ಆರ್ ಚೇತನ್ 8, ಆರ್. ಸ್ಮರಣ್ 62, ಎಸ್. ಶರತ್ 20, ಸಂಕಲ್ಪ್ 12ಕ್ಕೆ 1, ಕೆ. ಗೌತಮ್ 29ಕ್ಕೆ 1, ಅನಿರುದ್ಧ 18ಕ್ಕೆ 1).