ಇದು ಗುಜರಾತ್‌ ಟೈಟಾನ್ಸ್​ನ ‘ಹೊಸ ಕಥೆ’: ಐಪಿಎಲ್-18ಕ್ಕೆ ಶುಭಮಾನ್ ಗಿಲ್ ನಾಯಕತ್ವದಿಂದ ವಜಾ!

New Project (1)
Published on

ನವದೆಹಲಿ: ಮುಂಬರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸಾರಥ್ಯ ಶುಭಮಾನ್ ಗಿಲ್ ಕೈತಪ್ಪಲಿದ್ದು, ಆಫ್ಘಾನಿಸ್ತಾನ ಆಲ್ರೌಂಡರ್ ರಶೀದ್ ಖಾನ್ ನೂತನ ನಾಯಕನಾಗಿ ನೇಮಕವಾಗುವ ಸಾಧ್ಯತೆಗಳಿವೆ. ಹೊಸ ವರ್ಷದ ಸಂಭ್ರಮದಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಗುಜರಾತ್ ್ರಾಂಚೈಸಿ ಹಂಚಿಕೊಂಡಿರುವ ಪೋಸ್ಟ್ 2025ರ ಆವೃತ್ತಿಯ ನಾಯಕತ್ವ ಬದಲಾವಣೆಯ ಸುಳಿವು ನೀಡಿದೆ ಎನ್ನಲಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ವರ್ಗಾವಣೆಯಾದ ಬಳಿಕ 2023ರ ಆವೃತ್ತಿಗೆ ಗಿಲ್ ಗುಜರಾತ್ ನಾಯಕರಾಗಿದ್ದರು. 2 ಬಾರಿಯ ಫೈನಲಿಸ್ಟ್ ಗುಜರಾತ್, ಗಿಲ್ ಸಾರಥ್ಯದಲ್ಲಿ ಆಡಿದ 17ನೇ ಆವೃತ್ತಿಯಲ್ಲಿ 8ನೇ ಸ್ಥಾನಕ್ಕೆ ಸಮಾಧಾನ ಕಂಡಿತ್ತು. ಗುಜರಾತ್ ಬುಧವಾರ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಜೆರ್ಸಿ ನಂ.19 ಧರಿಸಿ ಬೆನ್ನು ತೋರಿಸಿರುವ ರಶೀದ್ ಖಾನ್ ಅವರ ಚಿತ್ರವಿದ್ದು, ‘ದಿ 2025 ಜಿಟಿ ಸ್ಟೋರಿ’ ಎಂಬ ಬರಹವಿದೆ. ಇದಕ್ಕೆ ‘ಸ್ಪಷ್ಟವಾದ ಬೋರ್ಡ್, ಹೊಸ ಕಥೆ’ ಎಂಬ ಟ್ಯಾಗ್ ಲೈನ್ ನೀಡಲಾಗಿದೆ.

ಐಪಿಎಲ್ ಆಟಗಾರರ ರಿಟೇನ್ ವೇಳೆಯೂ ರಶೀದ್ ಖಾನ್‌ಗೆ ಅತ್ಯಧಿಕ ಮೊತ್ತ ನೀಡಿರುವ ಗುಜರಾತ್, ಗಿಲ್ ಅವರ ಸಂಭಾವನೆಯಲ್ಲಿ ಕಡಿತಗೊಳಿಸಿ ಇತರ ಆಟಗಾರರನ್ನು ಉಳಿಸಿಕೊಳ್ಳಲು ವ್ಯಯಿಸಿತ್ತು. ರಶೀದ್‌ಗೆ ₹18 ಕೋಟಿ ನೀಡಿದ್ದ ಫ್ರಾಂಚೈಸಿ ಗಿಲ್‌ಗೆ ₹16.5 ಕೋಟಿ ನೀಡಿದೆ. 2022ರಿಂದಲೂ ಗಿಲ್, ರಶೀದ್ ಖಾನ್ ಇಬ್ಬರೂ ಗುಜರಾತ್ ತಂಡದ ಭಾಗವಾಗಿದ್ದು, ಇದುವರೆಗೆ ಐಪಿಎಲ್‌ನಲ್ಲಿ 2 ಬಾರಿ ತಂಡ ಮುನ್ನಡೆಸಿರುವ ರಶೀದ್ 1-1 ಸೋಲು-ಗೆಲುವಿನ ದಾಖಲೆ ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ರಶೀದ್ ಒಟ್ಟು 6 ತಂಡಗಳಿಗೆ ನಾಯಕನಾಗಿ ಕಾರ್ಯನಿರ್ವಹಿಸಿದ್ದು, 67 ಪಂದ್ಯಗಳಲ್ಲಿ 34 ಗೆಲುವು ಕಂಡಿದ್ದಾರೆ. ಜತೆಗೆ ಟೆಸ್ಟ್‌ನಲ್ಲಿಯೂ ಆಫ್ಘನ್ ತಂಡದ ಸಾರಥಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net