

GT vs MI: ಇಂದು (ಮೇ.06) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶುಭಮನ್ ಗಿಲ್, ಎಂಐಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬೈ ಪಡೆ, 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು ಕೇವಲ 155 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಮಧ್ಯೆ ಗಿಲ್ ಬೇಸರಗೊಂಡ ದೃಶ್ಯಗಳು ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ಹರಿದಾಡಿವೆ.
ಪವರ್‌ಪ್ಲೇನಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ಕೊಟ್ಟ ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ ಗುಜರಾತ್ ಟೈಟಾನ್ಸ್ ಪಡೆ, ಒಂದಲ್ಲ, ಎರಡಲ್ಲ ಮೂರು ಬಹುಮುಖ್ಯ ಕ್ಯಾಚ್ಗಳನ್ನು ಹಿಡಿಯುವಲ್ಲಿ ವಿಫಲರಾದರು. ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ, ಸಾಯಿ ಸುದರ್ಶನ್ ವಿಲ್ ಜ್ಯಾಕ್ಸ್ ಕೊಟ್ಟ ಕ್ಯಾಚ್ ಕೈಬಿಟ್ಟರೆ, ಐದನೇ ಓವರ್‌ನಲ್ಲಿ, ಸಾಯಿ ಕಿಶೋರ್ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಮಿಡ್-ವಿಕೆಟ್ ಕೈಚೆಲ್ಲಿದರು. ಇನ್ನು ಆರನೇ ಓವರ್‌ನಲ್ಲಿ ಅರ್ಷದ್ ಖಾನ್ ಬೌಲಿಂಗ್‌ನಲ್ಲಿ ವಿಲ್ ಜ್ಯಾಕ್ಸ್ ಕೊಟ್ಟ ಮತ್ತೊಂದು ಕ್ಯಾಚ್ನ ಸಿರಾಜ್ ಕೈಬಿಟ್ಟರು. ಇದು ಗಿಲ್ ಕೋಪಕ್ಕೆ ಕಾರಣವಾಯಿತು.
ಮೂರು ಕ್ಯಾಚ್ಗಳನ್ನು ಕೈಚೆಲ್ಲಿದ ತಂಡದ ಆಟಗಾರರ ವಿರುದ್ಧ ಕೋಚ್ ಆಶಿಶ್ ನೆಹ್ರಾ ಮತ್ತು ಶುಭಮನ್ ಗಿಲ್ ಮೈದಾನದಲ್ಲೇ ಬೇಸರ ಹೊರಹಾಕಿದರು. ಕ್ಯಾಪ್ಟನ್ ಶುಭಮನ್ ಗಿಲ್ ಮುಖ ಮುಚ್ಚಿಕೊಂಡ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿವೆ. ಇದು ಜಿಟಿ ಅಭಿಮಾನಿಗಳ ಬೇಸರಕ್ಕೂ ಕಾರಣವಾಯಿತು,(ಏಜೆನ್ಸೀಸ್).