

ಟೋಕಿಯೊ: ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಒಲಿಂಪಿಕ್ಸ್‌ನಲ್ಲಿ ಉತ್ತಮ ಆರಂಭ ಕಂಡಿದ್ದಾರೆ. ಕಸುಮಿಗಾಸೆಕಿ ಕಂಟ್ರಿ ಕ್ಲಬ್‌ನಲ್ಲಿ ಬುಧವಾರ ಆರಂಭಗೊಂಡ ಮಹಿಳಾ ವಿಭಾಗದ ಗಾಲ್ಫ್ ಸ್ಪರ್ಧೆಯ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಕನ್ನಡತಿ ಅದಿತಿ ಅಶೋಕ್ (67 ಶಾಟ್) ಪ್ರಬಲ ಸ್ಪರ್ಧಿಗಳ ನಡುವೆಯೂ 2ನೇ ಸ್ಥಾನದಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಅವಳಿ ಪದಕದ ಒಡತಿ ಪಿವಿ ಸಿಂಧುಗೆ ಅದ್ಧೂರಿ ಸ್ವಾಗತ,
ರಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದ ಅದಿತಿ, ಅಮೆರಿಕದ ವಿಶ್ವ ನಂ. 1 ನೆಲ್ಲಿ ಕೊರ್ಡಾ ಜತೆಗೂಡಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಸ್ವೀಡನ್‌ನ ಮದಲೆನೆ ಸ್ಯಾಗ್‌ಸ್ಟ್ರೋಮ್ (66 ಶಾಟ್) ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ 4ನೇ ಸುತ್ತಿನ ಸ್ಪರ್ಧೆ ಇದಾಗಿದೆ. ನಾನು ನಿರೀಕ್ಷೆಗೂ ಮೀರಿ ಉತ್ತಮ ನಿರ್ವಹಣೆ ತೋರಿದೆ ಎಂದು ಅದಿತಿ ಪ್ರತಿಕ್ರಿಯಿಸಿದ್ದಾರೆ. ಭಾರತದ ಮತ್ತೋರ್ವ ಸ್ಪರ್ಧಿ ದೀಕ್ಷಾ ಡಾಗರ್ (76ಶಾಟ್) 56ನೇ ಸ್ಥಾನದಲ್ಲಿದ್ದಾರೆ. ಒಟ್ಟು 60 ಆಟಗಾರ್ತಿಯರು ಕಣದಲ್ಲಿದ್ದಾರೆ.