ನಿಜಕ್ಕೂ ಭಾರತಕ್ಕೆ ದುಬೈ ಪಿಚ್​ ವರವಾಯ್ತಾ? ಚಾಂಪಿಯನ್ಸ್​ ಟ್ರೋಫಿ ವಿಜೇತ ತಂಡ ಕುರಿತು ಗ್ಲೆನ್​ ಮೆಕ್​ಗ್ರಾತ್​ ನೇರನುಡಿ | Glenn McGrath

ವಿಜಯವಾಣಿ - 2025-03-15T083830.444
Published on

Glenn McGrath: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ನ್ಯೂಜಿಲೆಂಡ್​ ವಿರುದ್ಧ ಗೆದ್ದು ಬೀಗಿದ ರೋಹಿತ್ ಶರ್ಮ ಪಡೆ, 2025ರ ಚಾಂಪಿಯನ್ಸ್​ ಆಗಿ ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯತು. ಇದು ಕೋಟ್ಯಂತರ ಕ್ರೀಡಾಭಿಮಾನಿಗಳ ಮೆಚ್ಚುಗೆ, ಪ್ರಶಂಸೆಗೆ ಕಾರಣವಾಯಿತು. ಒಂದೆಡೆ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದರೆ, ಒಂದೇ ಪಿಚ್​​ನಲ್ಲಿ ಆಡಿದ್ದು ಭಾರತಕ್ಕೆ ಗೆಲ್ಲಲು ಸುಲಭವಾಯಿತು ಎಂಬ ಆರೋಪ, ಚರ್ಚೆಗಳು ಮತ್ತೊಂದೆಡೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ದಿಗ್ಗಜ ಕ್ರಿಕೆಟಿಗ, ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್​ ಮೆಕ್​ಗ್ರಾತ್​, ಅಸಲಿಗೆ ಇಲ್ಲಿ ನಿಜವಾಗಲೂ ಲಭವಾಯಿತೇ ಎಂಬುದನ್ನು ಪ್ರಸ್ತಾಪಿಸಿದ್ದಾರೆ.

"ಮುಂದಿನ ದಿನಗಳಲ್ಲಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್ ಇಂಡಿಯಾ ತನ್ನೆಲ್ಲ ಪಂದ್ಯಗಳನ್ನು ದುಬೈ ಪಿಚ್​ನಲ್ಲೇ ಆಡಿತು. ಇಲ್ಲಿ ಭಾರತ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಆಡಿದರೆ ಅಥವಾ ಆಸ್ಟ್ರೇಲಿಯಾ ತನ್ನ ಎಲ್ಲಾ ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಆಡಿದಿದ್ದರೆ ಖಂಡಿತ ಅಲ್ಲಿ ಅವರಿಗೆ ಲಾಭವಾಯಿತು, ಗೆಲುವು ಸುಲಭವಾಯಿತು ಎನ್ನಬಹುದು. ಆದರೆ, ಅವರು ಆಡಿದ್ದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ. ಪಿಚ್​ ಕಂಡಿಷನ್​ ಅರಿತುಕೊಂಡ ರೋಹಿತ್ ಪಡೆ, ಸ್ಪಿನ್​ ದಾಳಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಚೆನ್ನಾಗಿ ಅರಿತಿತ್ತು" ಎಂದು ಸ್ಪಷ್ಟನೆ ನೀಡಿದರು.

"ಐಪಿಎಲ್ ಮತ್ತು ಟಿ20 ಕ್ರಿಕೆಟ್, ಏಕದಿನ ಕ್ರಿಕೆಟ್ ಅಭಿವೃದ್ಧಿಗೆ ಖಂಡಿತವಾಗಿಯೂ ಸಕಾರಾತ್ಮಕ ಕೊಡುಗೆ ನೀಡಿವೆ. ಭಾರತ ತಂಡವು ಆತ್ಮವಿಶ್ವಾಸದಿಂದ ಕೂಡಿದೆ ಮತ್ತು ಅವರು ನಿಜವಾಗಿಯೂ ತಮ್ಮ ಆಟವನ್ನು ಅರ್ಥಮಾಡಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಅನ್ನು ಉಳಿಸಿಕೊಳ್ಳುವುದು ಮುಖ್ಯವಾದರೂ, ಏಕದಿನ ಮತ್ತು ವಿಶ್ವಕಪ್‌ಗಳು ಸಹ ಗಮನಾರ್ಹ ಮೌಲ್ಯವನ್ನು ಹೊಂದಿವೆ. ಭಾರತ ಏಕದಿನ ಫಾರ್ಮೆಟ್​ನಲ್ಲಿ ಶ್ರೇಷ್ಠವಾಗಿದೆ. ಟೀಮ್ ಇಂಡಿಯಾ ಉತ್ತಮ ಗುಣಮಟ್ಟದ ತಂಡ ಎಂಬುದನ್ನು ಅಲ್ಲಗಳೆಯುವಂತಿಲ್ಲ" ಎಂದು ಮೆಕ್‌ಗ್ರಾತ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net