ಏಕದಿನ ಕ್ರಿಕೆಟ್​​ಗೆ ದಿಢೀರ್​ ನಿವೃತ್ತಿ ಹೇಳಿದ ಗ್ಲೆನ್​​​ ಮ್ಯಾಕ್ಸ್​​ವೆಲ್: ಕಾರಣ ಹೀಗಿದೆ... | Retirement

dk - 2025-06-02T131158.561
Published on

Retirement: ಆಸ್ಟ್ರೇಲಿಯಾದ ಸ್ಟಾರ್​ ಬ್ಯಾಟರ್​ ಗ್ಲೆನ್​ ಮ್ಯಾಕ್ಸ್​​ವೆಲ್(Glenn Maxwell ) ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಸೋಮವಾರ ವಿದಾಯ ಘೋಷಿಸಿದ್ದಾರೆ. ಅದಾಗ್ಯೂ ಟಿ-20 ಮುಂದುವರೆಸುವುದಾಗಿ ತಿಳಿಸಿದ್ದಾರೆ.

36 ವರ್ಷ ವಯಸ್ಸಿನ ಮ್ಯಾಕ್ಸ್​​ವೆಲ್​ ಆಸ್ಟ್ರೇಲಿಯಾ ಪರ 149 ಏಕದಿನ ಪಂದ್ಯಗಳನ್ನು ಆಡಿದ್ದಾರೆ, 136 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 3149 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 3990 ರನ್ ಕಲೆಹಾಕಿದ್ದಾರೆ. ಇದರ ನಡುವೆ ಒಂದು ದ್ವಿಶತಕ ಹಾಗೂ 4 ಶತಕ ಮತ್ತು 23 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಇವರು ಎರಡು ಏಕದಿನ ವಿಶ್ವಕಪ್‌ಗಳನ್ನು ಗೆದ್ದಿದ್ದಾರೆ.

2022ರಲ್ಲಿ ಉಂಟಾದ ಗಂಭೀರ ಕಾಲಿನ ಗಾಯದ ಪರಿಣಾಮಗಳನ್ನು ಇನ್ನೂ ಎದುರಿಸುತ್ತಿರುವ ಮ್ಯಾಕ್ಸ್‌ವೆಲ್, ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸಮಯದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಬಹಿರಂಗಪಡಿಸಿದರು. 2027ರ ಏಕದಿನ ವಿಶ್ವಕಪ್‌ಗೆ ತಾನು ಅರ್ಹತೆ ಪಡೆಯುವುದಿಲ್ಲ ಎಂದು ಆಸ್ಟ್ರೇಲಿಯಾದ ಮುಖ್ಯ ಆಯ್ಕೆದಾರ ಜಾರ್ಜ್ ಬೈಲಿಗೆ ತಿಳಿಸಿದ್ದಾರೆ. ಹೀಗಾಗಿ, ನನ್ನ ಸ್ಥಾನಕ್ಕೆ ಬೇರೆಯವನ್ನು ಆಯ್ಕೆ ಮಾಡಲು ಇದು ಸೂಕ್ತ ಸಮಯ. ಇದೇ ಕಾರಣದಿಂದ ನಿವೃತ್ತಿ ಘೋಷಿಸಿರುವುದಾಗಿ ಮ್ಯಾಕ್ಸ್​ವೆಲ್ ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net