ವೆಸ್ಟ್​ ಇಂಡೀಸ್​ ವಿರುದ್ದ ಗಿಲ್​ ಶತಕ: ಸಚಿನ್​, ರೋಹಿತ್​ ದಾಖಲೆ ಮುರಿದ ಶುಭಮನ್​ | Shubman Gill

ವೆಸ್ಟ್​ ಇಂಡೀಸ್​ ವಿರುದ್ದ ಗಿಲ್​ ಶತಕ: ಸಚಿನ್​, ರೋಹಿತ್​ ದಾಖಲೆ ಮುರಿದ ಶುಭಮನ್​ | Shubman Gill
Published on

Shubman Gill: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ 2 ನೇಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಟೆಸ್ಟ್​ನಲ್ಲಿ​ 10 ನೇಯ ಶತಕ ಸಿಡಿಸಿದ್ದಾರೆ. ಅಲ್ಲದೆ, ಈ ಶತಕದಿಂದ ಟೆಸ್ಟ್ ನಾಯಕನಾಗಿ ಗಿಲ್ ಅನೇಕ ಮೈಲಿಗಲ್ಲುಗಳನ್ನು ತಲುಪಿದ್ದಾರೆ.

ಟೆಸ್ಟ್​ ಮಾದರಿಯ ಟೆಸ್ಟ್‌ನಲ್ಲಿ ನಾಯಕತ್ವ ವಹಿಸಿಕೊಂಡಿದ್ದರಿಂದ ಗಿಲ್​ ಇತ್ತೀಚಿನ ಶತಕವು ದಾಖಲೆ ಮುರಿದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಇತಿಹಾಸದಲ್ಲಿ ಭಾರತದ ಪರವಾಗಿ ಅತಿಹೆಚ್ಚು ಶತಕ ಗಳಿಸಿದ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಡಬ್ಲ್ಯೂಟಿಸಿ ಇತಿಹಾಸದಲ್ಲಿ ರೋಹಿತ್ ದಾಖಲೆ ಮುರಿದ ಗಿಲ್

26 ವರ್ಷದ ಗಿಲ್​ ಡಬ್ಲ್ಯೂಟಿಸಿ ಇತಿಹಾಸದಲ್ಲಿ ಭಾರತ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರಾಗಿದ್ದಾರೆ. ಭಾರತದ ಪರ WTC ಶುಭಮನ್ ಗಿಲ್ 10, ರೋಹಿತ್ ಶರ್ಮಾ , 9 ಮತ್ತು ಯಶಸ್ವಿ ಜೈಸ್ವಾಲ್,7 ಶತಕದೊಂದಿಗೆ ನಂತರದ ಸ್ಥಾನಗಳಿದ್ದಾರೆ.

ಕೊಹ್ಲಿ ದಾಖಲೆ ಸರಿಗಟ್ಟಿದ ಗಿಲ್, ಸಚಿನ್​ ದಾಖಲೆ ಉಡೀಸ್​

ಶುಭಮನ್ ಗಿಲ್ ಭಾರತ ಪರ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಒಂದೇ ವರ್ಷದಲ್ಲಿ ನಾಯಕನಾಗಿ ವಿರಾಟ್​ 5 ಶತಕಗಳನ್ನು ಬಾರಿಸಿದ್ದಾರೆ. ಅದರೆ, ಈಗ 2025 ರಲ್ಲಿ ಗಿಲ್​ ಐದು ಶತಕಗಳನ್ನು ಸಿಡಿಸಿದ್ದಾರೆ. ಆದರೆ, ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಈ ಅದ್ಭುತ ಮೈಲಿಗಲ್ಲು ಸಾಧಿಸಿದ್ದು, 2017 ಮತ್ತು 2018 ರಲ್ಲಿ ಟೆಸ್ಟ್ ನಾಯಕನಾಗಿ ತಲಾ 5 ಶತಕಗಳನ್ನು ದಾಖಲಿಸಿದ್ದರು. 2016 ರಲ್ಲಿ ನಾಲ್ಕು ಶತಕಗಳನ್ನು ದಾಖಲಿಸಿದರು.

ಸಚಿನ್ ತೆಂಡೂಲ್ಕರ್ 1997 ರಲ್ಲಿ ಭಾರತದ ಟೆಸ್ಟ್ ನಾಯಕರಾಗಿದ್ದಾಗ ಸಚಿನ್ ನಾಲ್ಕು ಶತಕಗಳನ್ನು ಗಳಿಸಿದ್ದರು. ಅದರೆ, ಈಗ ಗಿಲ್​ 5 ಶತಕ ಬಾರಿಸಿದ್ದಾರೆ. ಅಲ್ಲದೆ, 2006 ರಲ್ಲಿ ಏಳು ಶತಕಗಳನ್ನು ಗಳಿಸಿರುವ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ.

WTC ಯಲ್ಲಿ ನಾಯಕನಾಗಿ ಬಾಬರ್ ಅಜಮ್ ಹಿಂದಿಕ್ಕಿದ ಗಿಲ್

ಶುಭಮನ್ ಗಿಲ್ ತಮ್ಮ 10 ನೇ ಶತಕದೊಂದಿಗೆ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ನಾಯಕನಾಗಿ, ಗಿಲ್​ ತಮ್ಮ ಐದನೇ ಶತಕವನ್ನು ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಟೆಸ್ಟ್​ನಲ್ಲಿ ನಾಯಕನಾಗಿದ್ದಾಗ ನಾಲ್ಕು ಶತಕಗಳನ್ನು ಗಳಿಸಿದ್ದರು. ಒಟ್ಟಾರೆಯಾಗಿ, ಜೋ ರೂಟ್ ಇಂಗ್ಲೆಂಡ್ ನಾಯಕನಾಗಿ 100 ಕ್ಕೂ ಹೆಚ್ಚು 8 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net