ಮಾಜಿ ನಾಯಕ ಬಾಬರ್ ಅಜಮ್ ಬದಲಿಗೆ ಅವಕಾಶ, ಪದಾರ್ಪಣೆಯಲ್ಲಿ ಶತಕ ಸಿಡಿಸಿದ ಕಮ್ರಾನ್

New-Project-3-2
Published on

ಮುಲ್ತಾನ್: ಮಾಜಿ ನಾಯಕ ಬಾಬರ್ ಅಜಮ್ ಬದಲಿಗೆ ಅವಕಾಶ ಪಡೆದು ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಕಮ್ರಾನ್ ಗುಲಾಂ (118 ರನ್, 224 ಎಸೆತ, 11 ಬೌಂಡರಿ, 1 ಸಿಕ್ಸರ್) ಸಾಹಸದಿಂದ ಆತಿಥೇಯ ಪಾಕಿಸ್ತಾನ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮೊದಲ ದಿನದ ಗೌರವ ಸಂಪಾದಿಸಿದೆ.

ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕ್ 19 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ಆಗ ಸೈಮ್ ಆಯುಬ್ (77 ರನ್, 16 ಎಸೆತ, 7 ಬೌಂಡರಿ) ಹಾಗೂ ಕಮ್ರಾನ್ ನಡೆಸಿದ ಜತೆಯಾಟದ ನೆರವಿನಿಂದ ಚೇತರಿಸಿಕೊಂಡ ಪಾಕ್, ದಿನದಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್‌ಗೆ 259 ರನ್ ಪೇರಿಸಿದೆ. 29 ವರ್ಷದ ಕಮ್ರಾನ್ ಪದಾರ್ಪಣೆ ಟೆಸ್ಟ್‌ನಲ್ಲೇ ಶತಕ ಸಿಡಿಸಿದ 13ನೇ ಪಾಕ್ ಕ್ರಿಕೆಟಿಗ ಎನಿಸಿದರು.

ಪಾಕಿಸ್ತಾನ: 5 ವಿಕೆಟ್‌ಗೆ 259 (ಶಫೀಕ್ 7, ಆಯುಬ್ 77, ಮಸೂದ್ 3, ಕಮ್ರಾನ್ 118, ಶಕೀಲ್ 4, ರಿಜ್ವಾನ್ 37*,ಸಲ್ಮಾನ್ 5*, ಜಾಕ್ ಲೀಚ್ 92ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net