IPL ಫೈನಲ್ ವೀಕ್ಷಿಸಲು ವಿಶಿಷ್ಟ ಶೈಲಿಯಲ್ಲಿ ಆಗಮಿಸಿದ ಕ್ರಿಸ್ ಗೇಲ್ | IPL 2025

dk - 2025-06-03T193612.457
Published on

IPL 2025ರ ಅಂತಿಮ ಪಂದ್ಯವು ರಜತ್ ಪಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುಮಾರು 1 ಲಕ್ಷ 32 ಸಾವಿರ ಜನರು ಸೇರಿದ್ದಾರೆ ಎಂದು ವರದಿಯಾಗಿದೆ.

ಇನ್ನು ಕೆಲವರು RCB ಯನ್ನು ಬೆಂಬಲಿಸುತ್ತಿದ್ದಾರೆ ಮತ್ತು ಕೆಲವರು ಪಂಜಾಬ್ ಅನ್ನು ಬೆಂಬಲಿಸುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ಜೊತೆ ಆಡಿರುವ ಕ್ರಿಸ್ ಗೇಲ್ ಈ ಪಂದ್ಯವನ್ನು ವಿಶಿಷ್ಟ ರೀತಿಯಲ್ಲಿ ವೀಕ್ಷಿಸಲು ಬಂದರು. ಅವರು ಎರಡೂ ತಂಡಗಳನ್ನು ಬೆಂಬಲಿಸುತ್ತಿದ್ದಾರೆ.

ಹೌದು, ಕ್ರಿಸ್ ಗೇಲ್ ಐಪಿಎಲ್ ಫೈನಲ್ ವೀಕ್ಷಿಸಲು ಆರ್‌ಸಿಬಿ ಜೆರ್ಸಿಯ ಜತೆಗೆ ಪಂಜಾಬ್ ಪೇಟವನ್ನು ಧರಿಸುವ ಮೂಲಕ ಎರಡು ತಂಡಗಳಿಗೆ ಬೆಂಬಲ ನೀಡಿದ್ದಾರೆ. ಗೇಲ್​​ ಎರಡೂ ತಂಡಗಳ ಪರ ಆಡಿದ್ದಾರೆ ಮತ್ತು ಎರಡೂ ತಂಡಗಳು ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ.

ಗೇಲ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು ಕೆಕೆಆರ್ ಪರ ಆಡುವ ಮೂಲಕ. ಇದಾದ ನಂತರ, ಅವರು ಆರ್‌ಸಿಬಿ ಮತ್ತು ನಂತರ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಅವರು ಕೆಕೆಆರ್ ಪರ 16 ಪಂದ್ಯಗಳನ್ನು, ಪಂಜಾಬ್ ಪರ 41 ಪಂದ್ಯಗಳನ್ನು ಮತ್ತು ಆರ್‌ಸಿಬಿ ಪರ ಅತಿ ಹೆಚ್ಚು 85 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಇನ್ನಿಂಗ್ಸ್ (175*) ಆಡಿದ ಬ್ಯಾಟ್ಸ್‌ಮನ್ ಗೇಲ್, ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯೂ ಗೇಲ್ ಅವರ ಹೆಸರಿನಲ್ಲಿದೆ.

ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡುತ್ತಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net