ನೂತನ ಫ್ರಾಂಚೈಸಿ ಲಖನೌ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್

gautham gambhir for web
Published on

ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ನೂತನ ಫ್ರಾಂಚೈಸಿ ಲಖನೌ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ‘ತಂಡ ಕಟ್ಟಲು ಇದೊಂದು ಅದ್ಭುತ ಅವಕಾಶ, ಡಾ.ಗೋಯೆಂಕಾ ಹಾಗೂ ಆರ್‌ಪಿಎಸ್‌ಜಿ ಗ್ರೂಪ್‌ಗೆ ಧನ್ಯವಾದಗಳು’ ಎಂದು ಗಂಭೀರ್ ತಿಳಿಸಿದ್ದಾರೆ. ದೆಹಲಿಯ ಗಂಭೀರ್, ಹಾಲಿ ಬಿಜೆಪಿ ಸಂಸದರಾಗಿದ್ದು, ಇವರ ನಾಯಕತ್ವದಲ್ಲಿ ಕೋಲ್ಕತ ನೈಟ್ ರೈಡರ್ಸ್‌ ತಂಡ 2012 ಹಾಗೂ 2014ರಲ್ಲಿ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

40 ವರ್ಷದ ಗಂಭೀರ್ 48 ಟೆಸ್ಟ್, 147 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಲಿದ್ದಾರೆ. ಲಖನೌ ಫ್ರಾಂಚೈಸಿ ಈಗಾಗಲೇ ಆಂಡಿ ಪ್ಲವರ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ತಂಡ ಈಗಾಗಲೇ ಪ್ರಮುಖ ಆಟಗಾರರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದ್ದು, ಆದರೆ ತಂಡದ ಹೆಸರನ್ನು ಇದುವರೆಗೂ ಪ್ರಕಟಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net