ಆತ ನನ್ನ ಕುಟುಂಬ ಹಾಗೂ ಸೌರವ್​ ಗಂಗೂಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ; Gautam Gambhir ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಸ್ಟಾರ್​ ಆಟಗಾರ

gautam gambhir
Published on

ಮುಂಬೈ: 17ನೇ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬೆನ್ನಲ್ಲೇ ಗೌತಮ್ ಗಂಭೀರ್ (Gautam Gambhir) ಭಾರಿ ಹೈಪ್‌ನೊಂದಿಗೆ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಬಿಸಿಸಿಐ ಅವರು ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟಿದ್ದರು. ಆದರೆ, ನಿರೀಕ್ಷೆಗಳೆಲ್ಲವೂ ಹುಸಿಯಾಗಿದ್ದು, ಗೌತಮ್​ ಗಂಭೀರ್​​ ಕೋಚಿಂಗ್​ ಅವಧಿಯಲ್ಲೇ ಕಳಪೆ ಪ್ರದರ್ಶನ ನೀಡುತ್ತಿದೆ.

ಇನ್ನೂ ಗಂಭೀರ್​ (Gautam Gambhir) ಕೋಚ್​ ಆದ ಬಳಿಕ ಬದಲಾವಣೆ ಹೆಸರಿನಲ್ಲಿ ತಂಡದಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದು, ಇದು ನಕಾರಾತ್ಮಕ ಪರಿಣಾಮ ಬೀರಿದೆ. ಇನ್ನೂ ಗಂಭೀರ್​ ಅವಧಿಯಲ್ಲೇ ತಂಡ ಬೇಡದ ದಾಖಲೆಗಳಿಗೆ ಕೊರಳೊಡ್ಡುತ್ತಿದ್ದು, ಕೋಚ್​ ಬದಲಾಯಿಸುವಂತೆ ಆಗ್ರಹ ಕೇಳಿ ಬರುತ್ತಿರುವ ನಡುವೆಯೇ ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ ಗೌತಮ್​ ಗಂಭೀರ್​ (Gautam Gambhir) ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ.

ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಕಾಶ್​ದೀಪ್​ ಬದಲು ಹರ್ಷಿತ್​ ರಾಣಾರನ್ನು ಆಡಿಸಲಾಗಿತ್ತು. ನ್ಯೂಜಿಲೆಂಡ್​ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಗಳಲ್ಲಿ ಉತ್ತಮ ಪ್ರದರ್ಶನ ತೋರಿದರು ಆಕಾಶ್​ದೀಪ್​ರನ್ನು ತಂಡದಿಂದ ಕೈ ಬಿಡಲಾಗಿತ್ತು. ಆದ್ದರಿಂದ ನಾವು ಏನೇ ಹೇಳಿಕೆ ನೀಡಿದರು ಅವರ ಪರವಾಗಿ ಕೆಲವರು ಮಾತನಾಡುತ್ತಾರೆ. 

Manoj Tiwari

ನಾನು ಇತ್ತೀಚಿಗೆ ನೀಡಿದ ಹೇಳಿಕೆಗೆ ಬದ್ಧನಾಗಿದ್ಧೇನೆ. ಏನಾದರೂ ಅಥವಾ ಯಾರಾದರೂ ಸತ್ಯವನ್ನು ಹೇಳಿದಾಗ, ಜನರು ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ನಾನು ಇರುವ ವಿಚಾರವನ್ನೇ ಹೇಳಿದ್ದೇನೆ. ಅದನ್ನು ಬಿಟ್ಟು ಬೇರೇನು ಹೇಳಿಲ್ಲ. ದಿಲ್ಲಿಯಲ್ಲಿ ನಡೆದ ರಣಜಿ ಪಂದ್ಯದ ವೇಳೆ ನನ್ನೊಂದಿಗೆ ಜಗಳವಾಡಿದಾಗ ಗೌತಮ್ ಗಂಭೀರ್ (Gautam Gambhir) ಅವರು ಸೌರವ್ ಗಂಗೂಲಿ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಅವರು ಆಡಿರುವ ಪ್ರತಿ ಮಾತನ್ನು ಅಲ್ಲಿದ್ದವರು ಕೇಳಿಸಿಕೊಂಡಿದ್ದರು ಎಂದು ಮನೋಜ್​ ತಿವಾರಿ ಆರೋಪಿಸಿದ್ದಾರೆ. 

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಗಂಭೀರ್ (Gautam Gambhir) ಅವರ ನಿರ್ಧಾರಗಳ ಬಗ್ಗೆ ಮನೋಜ್​ ತಿವಾರಿ ವಾಗ್ದಾಳಿ ನಡೆಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಈ ಆಟಗಾರರ ಪ್ರದರ್ಶನವನ್ನು ಗಮನಿಸದೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದ್ದನ್ನು ತಿವಾರಿ ವಿರೋಧಿಸಿದ್ದರು. ಇದರ ಬೆನ್ನಲ್ಲೇ ಹರ್ಷಿತ್​ ರಾಣಾ, ನಿತೀಶ್​ ರಾಣಾ ಸೇರಿದಂತೆ ಕೆಕೆಆರ್​ ತಂಡದಲ್ಲಿದ್ದ ಆಟಗಾರರು ಮನೋಜ್​ ತಿವಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net