

ಬೆಂಗಳೂರು: ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್(LSG) ನಡುವೆ ನಡೆದ ರೋಚಕ ಪಂದ್ಯ ,ಮುಗಿದ ಬಳಿಕ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾಡಿರುವ ಆ ಒಂದು ಕೆಲಸ ಹೆಚ್ಚು ಸದ್ದು ಮಾಡುತ್ತಿದೆ.
ಪಂದ್ಯ ಮುಗಿದ ಬಳಿಕ ಉಭಯ ತಂಡದ ಆಟಗಾರರು ಶುಬಾಶಯ ವಿನಿಮಯ ಮಾಡಿಕೊಳ್ಳುವ ವೇಳೆ ಕೊಹ್ಲಿ ಬಂದ ಗೌತಮ್ ಗಂಭೀರ್ ಹಾಗೂ ಕೊಹ್ಲಿ ನಡುವೆ ಲುಕ್ ಎಕ್ಸ್ಚೇಂಜ್ ಆಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಉಭಯ ತಂಡದ ಆಟಗಾರರು ಹ್ಯಾಂಡ್ ಶೇಕ್ ಮಾಡುವ ಸಮಯದಲ್ಲಿ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಎದುರಾಗಿದ್ದು ಈ ವೇಳೆ ಈ ಇಬ್ಬರು ಪರಸ್ಪರ ನೋಟಗಳನ್ನು ಬೀರಿದ್ದಾರೆ.
ಕೊಹ್ಲಿ ಜೊತೆ ಹ್ಯಾಂಡ್ ಶೇಕ್ ಮಾಡಿದ ನಂತರ ಗಂಭೀರ್ ಸುಮ್ಮನಿರಿ ಎಂದು ಸನ್ನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
ಗೌತಮ್ ಗಂಭೀರ್ IPL ಪಂದ್ಯದಲ್ಲಿ ಈ ರೀತಿ ನಡೆದುಕೊಳ್ಳುತ್ತಿರುವುದ ಇದೇ ಮೊದಲಲ್ಲ. ಈ ಹಿಂದೆ ಕೊಲ್ಕತ ನೈಟ್ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆ ಎಸೆತದಲ್ಲಿ ಲಕ್ನೋ ತಂಡ ಜಯಗಳಿಸಿದಾಗ ಇದೇ ರೀತಿ ಸಂಭ್ರಮಿಸಿದ್ದರು.
ಈ ಹಿಂದೆ ಆರ್ಸಿಬಿ-ಕೊಲ್ಕತ ನಡುವಿನ ಪಂದ್ಯದ ವೇಳೆ ಕೊಹ್ಲಿ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿತ್ತು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ಚರ್ಚೆಗೆ ಗ್ರಾಸವಾಗಿತ್ತು.