ಫೈನಲ್​ಗೆ ಅಜೇಯ ಭಾರತ: ನಾಯಕ ಉದಯ್​, ಸಚಿನ್​ ಬ್ಯಾಟಿಂಗ್​ ಸಾಹಸ

New-Project-2-2
Published on

ಬೆನೋನಿ: ಉದಯೋನ್ಮುಖ ಬ್ಯಾಟರ್​ ಸಚಿನ್​ ದಾಸ್​ (96 ರನ್​, 95 ಎಸೆತ, 11 ಬೌಂಡರಿ, 1 ಸಿಕ್ಸರ್​) ಶತಕ ವಂಚಿತ ಬ್ಯಾಟಿಂಗ್​ ಹಾಗೂ ನಾಯಕ ಉದಯ್​ ಸಹಾರನ್​ (81 ರನ್​, 124 ಎಸೆತ, 6 ಬೌಂಡರಿ) ಸಾಹಸದಿಂದ ಭಾರತ ಕಿರಿಯರ ತಂಡ 19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್​ ಸೆಮಿೈನಲ್​ನಲ್ಲಿ ಆತಿಥೇಯ ದಣ ಆಫ್ರಿಕಾ ವಿರುದ್ಧ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಹಾಲಿ ಚಾಂಪಿಯನ್​ ಭಾರತ ಸತತ 5 ಹಾಗೂ ಒಟ್ಟಾರೆ 9ನೇ ಬಾರಿಗೆ ೈನಲ್​ಗೇರಿದ ಸಾಧನೆ ಮಾಡಿದೆ.

ವಿಲೋಮೂರ್​ ಪಾರ್ಕ್​ನಲ್ಲಿ ಮಂಗಳವಾರ ನಡೆದ ಉಪಾಂತ್ಯದ ಕದನದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಇಳಿದ ದ.ಆಫ್ರಿಕಾ, ಆರಂಭಿಕ ಲುವಾನ್​&ಡ್ರೆ ಪ್ರಿಟೋರಿಯಸ್​ (76 ರನ್​, 102 ಎಸೆತ, 6 ಬೌಂಡರಿ, 3 ಸಿಕ್ಸರ್​) ಹಾಗೂ ರಿಚರ್ಡ್​ ಸೆಲೆಟ್ಸಾ ್ವನೆ (64 ರನ್​, 100 ಎಸೆತ, 4 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ನೆರವಿನಿಂದ 7 ವಿಕೆಟ್​ಗೆ 244 ರನ್​ಗಳ ಸ್ಫರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಆರಂಭಿಕ ಆಘಾತದ ನಡುವೆಯೂ, ಸಚಿನ್​ ದಾಸ್​ & ಉದಯ್​ ಸಹಾರನ್​ ಜತೆಯಾಟದ ಬಲದಿಂದ ಭಾರತ, 48.5 ಓವರ್​ಗಳಲ್ಲಿ 8 ವಿಕೆಟ್​ಗೆ 248 ರನ್​ಗಳಿಸಿ ಗೆಲುವಿನ ಕೇಕೆ ಹಾಕಿತು.

ದ.ಆಫ್ರಿಕಾ: 7 ವಿಕೆಟ್​ಗೆ 244(ಪ್ರಿಟೋರಿಯಸ್​ 76, ರಿಚರ್ಡ್​ 64, ಒಲಿವಿರ್​ 22, ಜೇಮ್ಸ್​ 24, ಟ್ರಿಸ್ಟನ್​ 23*, ರಾಜ್​ ಲಿಂಬಾನಿ 60ಕ್ಕೆ 3, ಮುಶೀರ್​ 43ಕ್ಕೆ 2). ಭಾರತ: 48.5 ಓವರ್​ಗಳಲ್ಲಿ 8 ವಿಕೆಟ್​ಗೆ 248 (ಅರ್ಶಿನ್​ 12, ಮುಶೀರ್​ 4, ಉದಯ್​ 81, ಸಚಿನ್​ 96, ರಾಜ್​ ಲಿಂಬಾನಿ 13*, ಕ್ವೆನಾ ಮಫಕಾ 32ಕ್ಕೆ 3, ಟ್ರಿಸ್ಟನ್​ 37ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net