ಫ್ರೀಡಂ ರನ್‌ನಲ್ಲಿ ಸಾವಿರಕ್ಕೂ ಅಧಿಕ ಓಟಗಾರರು ಭಾಗಿ

run
Published on

ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೊದಲ ಬಾರಿಗೆ ಆಯೋಜಿಸಿದ್ದ 5ಕೆ ಹಾಗೂ 10ಕೆ ಓಟದ ಜಿಯೋ ಮಾರ್ಟ್ ಫ್ರೀಡಂ ರನ್ ಯಶಸ್ವಿಯಾಗಿದೆ. ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನಲ್ಲಿ ಭಾನುವಾರ ನಡೆದ ಓಟದಲ್ಲಿ 1,100ಕ್ಕೂ ಅಧಿಕ ಓಟಗಾರರು ಭಾಗವಹಿಸಿದ್ದರು.

ಪುರುಷರ 10ಕೆ ವಿಭಾಗದಲ್ಲಿ ಸಂಪಂಗಿರಾಮ ನಗರದ ಗೋವಿಂದರಾಜ್ 32 ನಿಮಿಷ 56 ಸೆಕೆಂಡ್‌ಗಳಲ್ಲಿ ಓಟ ಪೂರೈಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 5ಕೆ ವಿಭಾಗದಲ್ಲಿ ನಾರಾಯಣಪುರದ ಕೆ.ಬಿ. ನಿತಿನ್ 16 ನಿಮಿಷ 23 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನ ಅಲಂಕರಿಸಿದರು.

ಮಹಿಳೆಯರ 10ಕೆ ವಿಭಾಗದಲ್ಲಿ ಚಂದನಾ 45 ನಿಮಿಷ 13 ಸೆಕೆಂಡ್‌ಗಳಲ್ಲಿ ಓಡಿ ಮೊದಲ ಸ್ಥಾನ ಪಡೆದರೆ, 5ಕೆ ಓಟವನ್ನು ಅಮೃತಾ ಪಿಳ್ಳೈ 21 ನಿಮಿಷ 30 ಸೆಕೆಂಡ್‌ಗಳಲ್ಲಿ ಮುಗಿಸಿ ಅಗ್ರಸ್ಥಾನ ಪಡೆದರು. ಓಟ ಪೂರ್ಣಗೊಳಿಸಿದ ಎಲ್ಲ ಸ್ಫರ್ಧಿಗಳಿಗೆ ಪದಕ ಮತ್ತು ಇ-ಪ್ರಮಾಣಪತ್ರ

ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net