ಕೈಯಲ್ಲಿ ಚೆಂಡು ತಡೆದು ಔಟಾದ ಮುಶ್ಫೀಕರ್! : ಐಸಿಸಿ ನಿಯಮದಲ್ಲಿ ಏನಿದೆ ?

New-Project-3-1
Published on

ಮೀರ್ಪುರ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ಕೈಯಲ್ಲಿ ತಡೆಯುವ ಮೂಲಕ ಬಾಂಗ್ಲಾದೇಶದ ಮಾಜಿ ನಾಯಕ ಮುಶ್ಫೀಕರ್ ರಹೀಂ ಅಪರೂಪದ ರೀತಿಯಲ್ಲಿ ವಿಕೆಟ್ ಕೈ ಚೆಲ್ಲಿದ್ದಾರೆ. ಈ ರೀತಿಯಲ್ಲಿ ಔಟಾದ ಬಾಂಗ್ಲಾದೇಶದ ಮೊದಲ ಬ್ಯಾಟರ್ ಎಂಬ ಅನಪೇಕ್ಷಿತ ದಾಖಲೆಗೆ ಪಾತ್ರರಾಗಿದ್ದಾರೆ.

2001ರಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ನ ಬ್ಯಾಟರ್ ಮೈಕೆಲ್ ವಾನ್ ಕೊನೆಯದಾಗಿ ಈ ರೀತಿ ಔಟಾಗಿದ್ದರು. 2017ರಲ್ಲಿ ನಿಯಮಗಳಲ್ಲಿ ಕೆಲ ಬದಲಾವಣೆ ತರಲಾಗಿತ್ತು. ಮೊದಲ ದಿನದ 41ನೇ ಓವರ್‌ನಲ್ಲಿ ವೇಗಿ ಕೈಲ್ ಜೇಮಿಸನ್ ಎಸೆದ 4ನೇ ಎಸೆತವನ್ನು ಡಿೆಂಡ್ ಮಾಡಿದ ಮುಶ್ಫೀಕರ್, ಚೆಂಡು ಬೌನ್ಸ್ ಆಗಿ ವಿಕೆಟ್‌ಗೆ ಬಡಿಯುವುದನ್ನು ತಪ್ಪಿಸಲು ಕೈಯನ್ನು ಬಳಸಿದರು. ಆಗ ಕಿವೀಸ್ ಆಟಗಾರರು ಅಂಪೈರ್‌ಗೆ ಮೇಲ್ಮನವಿ ಸಲ್ಲಿಸಿದರು, ಮೂರನೇ ಅಂಪೈರ್ ಜತೆ ಚರ್ಚಿಸಿದ ಆನ್-ಫೀಲ್ಡ್ ಅಂಪೈರ್‌ಗಳು ಔಟ್ ಎಂದು ತೀರ್ಪಿತ್ತರು. 37.1.2 ನಿಯಮ ಪ್ರಕಾರ ಬೌಲರ್ ಎಸೆದ ಚೆಂಡನ್ನು ಎದುರಿಸಲು ಬ್ಯಾಟ್ಸ್‌ಮನ್ ಬ್ಯಾಟ್ ಹೊರತುಪಡಿಸಿ ಕೈ ಬಳಸುವಂತಿಲ್ಲ, ಸ್ಟ್ರೈಕ್ ಅಥವಾ ನಾನ್ ಸ್ಟ್ರೈಕ್‌ನಲ್ಲಿರುವ ಬ್ಯಾಟ್ಸ್‌ಮನ್ ವಿಕೆಟ್ ಕಾಯ್ದುಕೊಳ್ಳಲು ಕೈ ಬಳಸಿದರೆ ಅದು ಅಪರಾಧ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net