ಪಾಕ್ ಸೀಮಿತ ಓವರ್ ತಂಡಕ್ಕೆ ನೂತನ ನಾಯಕ ನೇಮಕ: ಜಿಂಬಾಬ್ವೆ ಪ್ರವಾಸಕ್ಕೆ ಬಾಬರ್ ಗೈರು

New Project
Published on

ಲಾಹೋರ್: ಪಾಕಿಸ್ತಾನ ಸೀಮಿತ ಓವರ್‌ಗಳ ತಂಡದ ನೂತನ ನಾಯಕನಾಗಿ ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ ನೇಮಕಗೊಂಡಿದ್ದಾರೆ. ಬಾಬರ್ ಅಜಮ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ರಿಜ್ವಾನ್ ತುಂಬಲಿದ್ದಾರೆ. ಉಪನಾಯಕನಾಗಿ ಸಲ್ಮಾನ್ ಅಲಿ ಅಘಾ ಅವರನ್ನು ನೇಮಿಸಿರುವುದಾಗಿ ಪಿಸಿಬಿ ಭಾನುವಾರ ತಿಳಿಸಿದೆ. ನವೆಂಬರ್ 4ರಿಂದ 18ರವರೆಗೆ ಆಸೀಸ್ ವಿರುದ್ಧ ನಡೆಯಲಿರುವ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿ ರಿಜ್ವಾನ್‌ಗೆ ಮೊದಲ ಸವಾಲು ಆಗಿರಲಿದೆ.

ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2, 3ನೇ ಟೆಸ್ಟ್ ಪಂದ್ಯದ ಬಳಿಕ ಪಾಕ್ ತಂಡದಿಂದ ಹೊರಬಿದ್ದಿದ್ದ ಮಾಜಿ ನಾಯಕ ಬಾಬರ್ ಅಜಮ್ ಜತೆಗೆ ವೇಗಿಗಳಾದ ಶಹೀನ್ ಷಾ ಅಫ್ರಿದಿ ಮತ್ತು ನಸೀಮ್ ಷಾ ಆಸ್ಟ್ರೇಲಿಯಾ ವಿರುದ್ಧದ ಸೀಮಿತ್ ಓವರ್ ಸರಣಿಗೆ ಪಾಕ್ ತಂಡದಲ್ಲಿ ಮರಳಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಜಿಂಬಾಬ್ವೆ ಎದುರಿನ ಟಿ20 ಸರಣಿಯಿಂದ ಈ ಮೂವರನ್ನೂ ಕೈಬಿಡಲಾಗಿದೆ. ಮೂರು ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ಜಿಂಬಾಬ್ವೆ ಹಾಗೂ ಆಸೀಸ್ ಪ್ರವಾಸಕ್ಕೂ ಆರು ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಹಿರಿಯ ಆಟಗಾರರಾದ ಖರ್ ಜಮಾನ್, ಶಾದಾಬ್ ಖಾನ್‌ಗೆ ಕೊಕ್ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ 2 ಟೆಸ್ಟ್‌ಗಳಿಗೆ ಬಾಬರ್ ಅವರನ್ನು ಕೈಬಿಟ್ಟಿದ್ದಕ್ಕೆ ಎಕ್ಸ್‌ನಲ್ಲಿ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ ಖರ್ ಅವರನ್ನು ಪಿಸಿಬಿ ವಿಚಾರಣೆಗೆ ಗುರಿ ಪಡಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net