2010ರ ಫಿಫಾ ವಿಶ್ವಕಪ್​ ವೈರಲ್​ ತಾರೆ ಲಾರಿಸ್ಸಾ ಈ ಬಾರಿ ಹೊಸ ಪಾತ್ರದಲ್ಲಿ ಪ್ರತ್ಯಕ್ಷ!

2010ರ ಫಿಫಾ ವಿಶ್ವಕಪ್​ ವೈರಲ್​ ತಾರೆ ಲಾರಿಸ್ಸಾ ಈ ಬಾರಿ ಹೊಸ ಪಾತ್ರದಲ್ಲಿ ಪ್ರತ್ಯಕ್ಷ!
2010ರ ಫಿಫಾ ವಿಶ್ವಕಪ್​ ವೈರಲ್​ ತಾರೆ ಲಾರಿಸ್ಸಾ ಈ ಬಾರಿ ಹೊಸ ಪಾತ್ರದಲ್ಲಿ ಪ್ರತ್ಯಕ್ಷ!
Published on
ನ್ಯೂಜೆರ್ಸಿ: ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದ 2010ರ ಫಿಫಾ ವಿಶ್ವಕಪ್​ ವೇಳೆ ಪರಾಗ್ವೆ ರೂಪದರ್ಶಿ ಲಾರಿಸ್ಸಾ ರಿಕೆಲ್ಮೆ (Larissa Riquelme) ತನ್ನ ದೇಶ ಪ್ರಶಸ್ತಿ ಗೆದ್ದರೆ ಬತ್ತಲೆಯಾಗಿ ಬೀದಿಯಲ್ಲಿ ತಿರುಗುವೆ ಎಂಬ ಹೇಳಿಕೆ ಮತ್ತು ಎದೆ ಸಂಧಿಯಲ್ಲಿ ನೋಕಿಯಾ ಮೊಬೈಲ್​ ಇಟ್ಟುಕೊಂಡ ಹೊಸ ಸ್ಟೈಲ್​​ನಿಂದ ವಿಶ್ವದೆಲ್ಲೆಡೆ ಸುದ್ದಿಯಾಗಿದ್ದರು.ಇದೀಗ ಉತ್ತರ ಅಮೆರಿಕದ ವಿಶ್ವಕಪ್​ ವೇಳೆ ಅವರು 16 ವರ್ಷಗಳ ಬಳಿಕ ಹೊಸ ಪಾತ್ರದೊಂದಿಗೆ ಮರುಪ್ರವೇಶ ಪಡೆದಿದ್ದಾರೆ.

ವಿಶ್ವಕಪ್​ನಲ್ಲಿ ಗ್ಲಾಮರಸ್​ ಸೂಪರ್​ಫ್ಯಾನ್​ ಆಗಿಯೂ ವೈರಲ್​ ಆಗಿದ್ದ ಅವರು ಬಳಿಕ ರೂಪದರ್ಶಿಯಾಗಿ ಭಾರಿ ಬೇಡಿಕೆ ಪಡೆದಿದ್ದರು. "ಪ್ಲೇಬಾಯ್​' ಮ್ಯಾಗಜಿನ್​ ಮುಖಪುಟದಲ್ಲೂ ಕಾಣಿಸಿಕೊಂಡಿದ್ದರು. ಈ ಜನಪ್ರಿಯತೆಯಿಂದ ಅವರು ಪರಾಗ್ವೆಯ ನಂ. 1 ರೂಪದರ್ಶಿ ಎನಿಸಿದ್ದರು ಮತ್ತು ಅವರ ಬದುಕು ಬದಲಾಗಿತ್ತು.

ಇದೀಗ ಪರಾಗ್ವೆ ತಂಡ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್​ಗೆ ಮರುಪ್ರವೇಶ ಪಡೆದಿರುವ ಸಮಯದಲ್ಲಿ ಲಾರಿಸ್ಸಾ ಕೂಡ ಮರಳಿದ್ದಾರೆ. ಈ ಬಾರಿ ಅವರು ಕಾಮೆಂಟೇಟರ್​ ಕೆಲಸದ ಜವಾಬ್ದಾರಿಯೊಂದಿಗೆ ಆಗಮಿಸಿದ್ದಾರೆ. 3 ವರ್ಷಗಳ ಕಾಲ ವೀಕ್ಷಕವಿವರಣೆಗಾಗಿ ಪತ್ರಿಕೋದ್ಯಮದ ತರಬೇತಿ ಪಡೆದಿರುವ 41 ವರ್ಷದ ಲಾರಿಸ್ಸಾ, ಕಳೆದ ಸೆಪ್ಟೆಂಬರ್​ನಲ್ಲಿ ಪರಾಗ್ವೆಯ ವಿಶ್ವಕಪ್​ ಅರ್ಹತಾ ಪಂದ್ಯದ ವೇಳೆ ವೀಕ್ಷಕ ವಿವರಣೆಗೆ ಪದಾರ್ಪಣೆಯನ್ನೂ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net