ಅರ್ಜೆಂಟೀನಾ ಸರಣಿ ಗೆಲುವಿನ ಹಿಂದಿದೆ '500 ಕೆಜಿ' ರಹಸ್ಯ! ಏನದು ಅಮೆರಿಕಕ್ಕೆ ಹಡಗಿನಲ್ಲಿ ಬಂದಿಳಿದ ವಸ್ತು?

ಅರ್ಜಿಂಟೀನಾ ತಂಡದ ಆಟಗಾರರು
ಅರ್ಜಿಂಟೀನಾ ತಂಡದ ಆಟಗಾರರು
Published on

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಸೋಲು ನೋಡದ ಅರ್ಜೆಂಟೀನಾ ತಂಡ
  • ಮೆಸ್ಸಿ ತಂಡದ ಗೆಲುವಿನ ಹಿಂದಿದೆ 500 ಕೆಜಿ ಮಾಂಸದ ಕಥೆ
FIFA World Cup: ಪ್ರಸಕ್ತ ಆತಿಥೇಯ ಅಮೆರಿಕದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲು ನೋಡದೆ, ಸರಣಿ ಗೆಲುವಿನ ಓಟದಲ್ಲಿರುವ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ, ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ, ತಂಡವು 500 ಕೆಜಿ ಮಾಂಸವನ್ನು ತರಿಸಿಕೊಂಡ ವಿಚಾರ ಸದ್ಯ ಫುಟ್ಬಾಲ್​ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.  
ಅತ್ತ ರೋಚಕ ಪಂದ್ಯಗಳಲ್ಲಿ ಮೆಸ್ಸಿ ಹೊಡೆಯುತ್ತಿರುವ ಅದ್ಭುತ, ದಾಖಲೆಯ ಗೋಲುಗಳು ಅರ್ಜೆಂಟೀನಾ ತಂಡ ಸೆಮಿಫೈನಲ್‌ಗೆ  ಲಗ್ಗೆಯಿಡಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ. ಆದರೆ, ಈ ಯಶಸ್ಸಿನ ಹಿಂದೆ ಮೈದಾನದ ಹೊರತಾಗಿ ಒಂದು ರೋಚಕ ವಿಷಯ ಅಡಗಿರುವುದು 500 ಕೆಜಿ ಮಾಂಸದಲ್ಲಿ ಎಂಬ ವಿಷಯ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. 
ಅಮೆರಿಕದಲ್ಲಿ ನಡೆಯುತ್ತಿರುವ ಈ ಬಿಗ್ ಟೂರ್ನಿಯಲ್ಲಿ ತಮ್ಮ ಆಟಗಾರರಿಗೆ ತಾಯ್ನಾಡಿನ ಫೀಲ್ ಕೊಡಲು ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯು ಬರೋಬ್ಬರಿ 500 ಕೆಜಿ ಮಾಂಸವನ್ನು ಕನ್ಸಾಸ್ ಸಿಟಿಯಲ್ಲಿರುವ ತನ್ನ ಬೇಸ್‌ ಕ್ಯಾಂಪ್​ಗೆ ಶಿಪ್ ಮಾಡಿಸಿಕೊಂಡಿದೆ ಎಂಬ ಕುತೂಹಲಕಾರಿ ಮಾಹಿತಿ ಈಗ ಹೊರಬಿದ್ದಿದೆ. ಇದಕ್ಕೆ ಮುಂಚಿತವಾಗಿಯೇ ಪ್ಲ್ಯಾನ್​ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ.
ಆಟಗಾರರ ಫಿಟ್‌ನೆಸ್ ಮತ್ತು ಡಯಟ್ ವಿಷಯಕ್ಕೆ ಬಂದರೆ ಅರ್ಜೆಂಟೀನಾ ತಂಡ ಮೊದಲ ಆದ್ಯತೆ ನೀಡುತ್ತದೆ. ಅಮೆರಿಕದ ಕಠಿಣ ಕಸ್ಟಮ್ಸ್ ಮತ್ತು ನೈರ್ಮಲ್ಯ ನಿಯಮಗಳನ್ನು ಮೀರಿ ಈ ಪೋಷಕಾಂಶಭರಿತ ಆಹಾರವನ್ನು ತರಲು ತಂಡದ ಮ್ಯಾನೇಜ್‌ಮೆಂಟ್ ತಿಂಗಳುಗಟ್ಟಲೆ ಮುಂಚಿತವಾಗಿಯೇ ಪ್ಲ್ಯಾನ್​ ಮಾಡಿದ್ದಾಗಿ ವರದಿಯಾಗಿದೆ. 

ಒತ್ತಡ ದೂರವಿಡಲು ಬಾರ್ಬಿಕ್ಯೂ ಪಾರ್ಟಿ

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋಗಳಲ್ಲಿ, ಅರ್ಜೆಂಟೀನಾ ಆಟಗಾರರು ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯದ ಬಳಿಕ ತಮ್ಮ ಕ್ಯಾಂಪ್‌ನಲ್ಲಿ ಒಟ್ಟಿಗೆ ಕುಳಿತು ಬಾರ್ಬಿಕ್ಯೂ ಸವಿಯುತ್ತಾ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ. ಈ ರೀತಿಯ ಔತಣಕೂಟ, ಪಾರ್ಟಿಗಳು ಆಟಗಾರರಲ್ಲಿ ಒತ್ತಡ ಇಳಿಸುತ್ತೆ ಮತ್ತು ತಂಡದಲ್ಲಿ ಸ್ನೇಹಪರ ವಾತಾವರಣ ಮೂಡಿಸುತ್ತೆ ಎಂಬುದು ಮ್ಯಾನೇಜ್​ಮೆಂಟ್​ ನಂಬಿಕೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net