ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ತಡರಾತ್ರಿ ನಡೆದ ಪಂದ್ಯದಲ್ಲಿ 90 ನಿಮಿಷಗಳ ಆಟ ಗೋಲು ರಹಿತ ಸಮಬಲದಲ್ಲಿ ಕೊನೆಗೊಂಡಿತು. ಬಳಿಕ ಹೆಚ್ಚುವರಿ 30 ನಿಮಿಷಗಳ ಆಟದಲ್ಲೂ ಗೋಲು ದಾಖಲಾಗಲಿಲ್ಲ. ಬಳಿಕ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ಕೊಲಂಬಿಯಾದ ಡೇವಿನ್ಸನ್ ಸ್ಯಾಂಚೆಜ್ 2ನೇ ಮತ್ತು ಸ್ವಿರ್ಜಲೆಂಡ್ನ ಮ್ಯಾನ್ಯುಯೆಲ್ ಅಕಾಂಜಿ 3ನೇ ಹೊಡೆತದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಯಿಂದ ಹೊರಗೆ ಹೊಡೆದರು. 4ನೇ ಹೊಡೆತದಲ್ಲಿ ಕೊಲಂಬಿಯಾದ ಕುಚೊ ಹೆರ್ನಾಂಡೆಜ್ ಹೊಡೆತವನ್ನು ಸ್ವಿಸ್ ಗೋಲು ಕೀಪರ್ ಗ್ರೆಗರ್ ಕೋಬೆಲ್ ಬಲಗಡೆಗೆ ಡೈವ್ ಹೊಡೆದು ಯಶಸ್ವಿಯಾಗಿ ತಡೆಯುವ ಮೂಲಕ ಗೆಲುವಿಗೆ ನೆರವಾದರು. ಬಳಿಕ 5ನೇ ಹಾಗೂ ಕೊನೇ ಹೊಡೆತದಲ್ಲಿ ಕೊಲಂಬಿಯಾದ ಲೂಯಿಸ್ ಡಯಾಜ್ ಗೋಲು ಬಾರಿಸಿದರೂ, ಸ್ವಿಸ್ ಪರ ರುಬೆನ್ ವರ್ಗಾಸ್ ಕೂಡ ಗೋಲು ಬಾರಿಸುವುದರೊಂದಿಗೆ 2014ರ ನಂತರ ಮತ್ತೊಮ್ಮೆ 8ರ ಘಟ್ಟಕ್ಕೇರುವ ಕೊಲಂಬಿಯಾ ಕನಸು ಭಗ್ನಗೊಂಡಿತು. ರುಬೆನ್ ಪಂದ್ಯದ ಇಂಜುರಿ ಸಮಯದಲ್ಲಷ್ಟೇ (90+1) ಬದಲಿಗರಾಗಿ ಕಣಕ್ಕಿಳಿದಿದ್ದರು. ಪಂದ್ಯಕ್ಕೆ 52,497 ಪ್ರೇಕ್ಷಕರು ಸಾಕ್ಷಿಯಾದರು. ಈ ಪೈಕಿ ಫೇವರಿಟ್ ಕೊಲಂಬಿಯಾದ ಬೆಂಬಲಿಗರೇ ಹೆಚ್ಚಿದ್ದರು.