ಸೂಪರ್ನೋವಾ ಫುಟ್​ಬಾಲ್​ ಚಾಂಪಿಯನ್​ಷಿಪ್​: ಗ್ರೀನ್​ವುಡ್​, ಹೆಡ್​ಸ್ಟಾರ್ಟ್​ ತಂಡಗಳಿಗೆ ಪ್ರಶಸ್ತಿ

ಸೂಪರ್ನೋವಾ ಫುಟ್​ಬಾಲ್​ ಚಾಂಪಿಯನ್​ಷಿಪ್​: ಗ್ರೀನ್​ವುಡ್​, ಹೆಡ್​ಸ್ಟಾರ್ಟ್​ ತಂಡಗಳಿಗೆ ಪ್ರಶಸ್ತಿ
ಸೂಪರ್ನೋವಾ ಫುಟ್​ಬಾಲ್​ ಚಾಂಪಿಯನ್​ಷಿಪ್​: ಗ್ರೀನ್​ವುಡ್​, ಹೆಡ್​ಸ್ಟಾರ್ಟ್​ ತಂಡಗಳಿಗೆ ಪ್ರಶಸ್ತಿ
Published on
ಬೆಂಗಳೂರು: ಬೆಂಗಳೂರಿನ ಡಿಪೋ18 ಮೈದಾನದಲ್ಲಿ ಭಾನುವಾರ ನಡೆದ ಸಮಾರೋಪದೊಂದಿಗೆ ಮೊದಲ ಬಾರಿಗೆ ಆಯೋಜಿಸಲಾದ ಸೂಪರ್ನೋವಾ ಫುಟ್​ಬಾಲ್ ಚಾಂಪಿಯನ್​ಷಿಪ್​ (SuperNova Football Championship) ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕ್ಯಾಪ್ರಿ ಸ್ಪೋರ್ಟ್ಸ್ ನ ನೋವಾ ಸ್ಪೋರ್ಟ್ಸ್ ಉಪಕ್ರಮದಡಿ ನಡೆದ ಈ ಚಾಂಪಿಯನ್ಷಿಪ್ನಲ್ಲಿ 13, 15 ಮತ್ತು 17 ವರ್ಷದೊಳಗಿನವರ ವಿಭಾಗಗಳಲ್ಲಿ ಎರಡು ದಿನಗಳ ಕಾಲ ಸ್ಪರ್ಧಿಸಿದವು.

ಬಾಲಕಿಯರನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿದ್ದ ಈ ಚಾಂಪಿಯನ್ಷಿಪ್ನಲ್ಲಿ ಮೈದಾನದಿಂದ ಹಿಡಿದು ಫುಟ್​ಬಾಲ್ ಪಂದ್ಯಗಳವರೆಗೆ ಹಾಗೂ ಪಂದ್ಯಗಳ ಸುತ್ತಮುತ್ತಲಿನ ಸಂಪೂರ್ಣ ಅನುಭವಕ್ಕೆ ವಿಶೇಷ ಆದ್ಯತೆ ನೀಡಲಾಗಿತ್ತು.
ಡಿಪೋ18ಕ್ಕೆ ಆಗಮಿಸಿದ ಆಟಗಾರ್ತಿಯರು, ತರಬೇತುದಾರರು ಹಾಗೂ ಕುಟುಂಬ ಸದಸ್ಯರಿಗೆ ಶಾಲಾ ಮಟ್ಟದ ಬಾಲಕಿಯರ ಫುಟ್​ಬಾಲ್​ನಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವಂತಹ ಪಂದ್ಯಾವಳಿ ಅನುಭವ ದೊರೆಯಿತು. ಹಲವು ಮೈದಾನಗಳು, ವೃತ್ತಿಪರವಾಗಿ ನಿರ್ವಹಿಸಲಾದ ಸ್ಪರ್ಧಾ ಮಾದರಿ ಹಾಗೂ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯಗಳ ವಾತಾವರಣವನ್ನು ಹೋಲುವ ಉತ್ಸಾಹಭರಿತ ವಾತಾವರಣ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿತ್ತು.
ಪಂದ್ಯಗಳಲ್ಲಿಯೂ ಅದೇ ಮಟ್ಟದ ಪೈಪೋಟಿ ಕಂಡುಬಂತು. ಎರಡು ದಿನಗಳಲ್ಲಿ ಒಟ್ಟು 69 ಪಂದ್ಯಗಳು ನಡೆದಿದ್ದು, 222 ಗೋಲುಗಳು ದಾಖಲಾಗಿವೆ. ಎಲ್ಲಾ ತಂಡಗಳು ಕೊನೆಯ ಸೀಟಿಯವರೆಗೂ ಹೋರಾಟ ನಡೆಸಿದ್ದು, ಮೂರು ವಯೋಮಾನದ ವಿಭಾಗಗಳಲ್ಲೂ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿದ್ದವು.
ಗ್ರೀನ್ ವುಡ್ ಹೈಗೆ 13 ಮತ್ತು 15 ವಯೋಮಿತಿ ಪ್ರಶಸ್ತಿ
13 ವಯೋಮಿತಿ ವಿಭಾಗದಲ್ಲಿ ಗ್ರೀನ್​ವುಡ್ ಹೈ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ಶಾಲೆಯ ಅನ್ವೇಷಾ ಪಾಂಡೆ 20 ಗೋಲುಗಳೊಂದಿಗೆ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ್ತಿ ಪ್ರಶಸ್ತಿ ಪಡೆದರು. ಹೆಡ್​ಸ್ಟಾರ್ಟ್​ ಅಕಾಡೆಮಿಯ ತನ್ವಿ ಮಹೇಶ್ವರಿ ಅತ್ಯುತ್ತಮ ಗೋಲು ಕೀಪರ್ ಪ್ರಶಸ್ತಿ ಪಡೆದರೆ, ಗ್ರೀನ್​ವುಡ್ ಹೈನ ಎ.ಎಸ್. ಮಿಥ್ರಾ ಹಯಾತಿ ಅತ್ಯಂತ ಮೌಲ್ಯಯುತ ಆಟಗಾರ್ತಿ ಎಂದು ಆಯ್ಕೆಯಾದರು.
15 ವಯೋಮಿತಿ ವಿಭಾಗದಲ್ಲೂ ಗ್ರೀನ್​ವುಡ್ ಹೈ ಚಾಂಪಿಯನ್ ಆಯಿತು. ಗ್ರೀನ್​ವುಡ್ ಹೈನ ಆಯುಷಿ ಕಾರಂತ್ 16 ಗೋಲುಗಳೊಂದಿಗೆ ಟಾಪ್ ಗೋಲು ಸ್ಕೋರರ್ ಪ್ರಶಸ್ತಿ ಪಡೆದರು. ಹೆಡ್​ಸ್ಟಾರ್ಟ್​ ಅಕಾಡೆಮಿಯ ಅನೈಶಾ ಗುಪ್ತಾ ಅತ್ಯುತ್ತಮ ಗೋಲು ಕೀಪರ್ ಪ್ರಶಸ್ತಿ ಪಡೆದರೆ, ಗ್ರೀನ್​ವುಡ್ ಹೈನ ರಿಚಾ ಭಟ್ಟಾ ಎಂವಿಪಿ ಪ್ರಶಸ್ತಿಗೆ ಭಾಜನರಾದರು.
17 ವಯೋಮಿತಿ ವಿಭಾಗದಲ್ಲಿ ಹೆಡ್​ಸ್ಟಾರ್ಟ್​ ಅಕಾಡೆಮಿ ಚಾಂಪಿಯನ್ ಪಟ್ಟಕ್ಕೇರಿತು. ಡಿಪಿಎಸ್ ಬೆಂಗಳೂರು ಈಸ್ಟ್ನ ಕಕುಲವೇರಪು ಕೃಷ್ಣ ಮನೋಗ್ಯಾ 10 ಗೋಲುಗಳೊಂದಿಗೆ ಟಾಪ್ ಗೋಲು ಸ್ಕೋರರ್ ಪ್ರಶಸ್ತಿ ಪಡೆದರು. ಅದೇ ಶಾಲೆಯ ಪ್ರೇಕ್ಷಾ ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿ ಪಡೆದರೆ, ಎಂ.ಎಸ್. ಧೋನಿ ಸ್ಕೂಲ್, ಹೊಸೂರಿನ ವೈಷ್ಣವಿ ಎಂ. ಅತ್ಯಂತ ಮೌಲ್ಯಯುತ ಆಟಗಾರ್ತಿ ಎಂದು ಆಯ್ಕೆಯಾದರು.
ಸಂಪೂರ್ಣ ಫುಟ್ಬಾಲ್ ಅನುಭವ
ಎಸ್ ಎನ್ ಎಫ್ ಸಿಅನ್ನು ಕೇವಲ ಶಾಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಾಗಿ ರೂಪಿಸದೆ, ಆಟಗಾರ್ತಿಯರು, ಶಾಲೆಗಳು, ತರಬೇತುದಾರರು ಮತ್ತು ಕುಟುಂಬಗಳಿಗೆ ಸಂಪೂರ್ಣ ಫುಟ್ಬಾಲ್ ಅನುಭವ ನೀಡುವ ಉದ್ದೇಶದಿಂದ ಆಯೋಜಿಸಲಾಗಿತ್ತು.
ಬಹು ಮೈದಾನಗಳಲ್ಲಿ ನಡೆದ ಸ್ಪರ್ಧಾತ್ಮಕ ಪಂದ್ಯಗಳ ಜೊತೆಗೆ, ಸಂವಾದಾತ್ಮಕ ಮನರಂಜನಾ ವಲಯಗಳು, ಎಲ್ಲರಿಗೂ ಮುಕ್ತವಾಗಿದ್ದ ಫುಟ್​ಬಾಲ್ ಮಿನಿ-ಗೇಮ್ಗಳು, ಕಂಟೆಂಟ್ ಕ್ರಿಯೇಷನ್ ಅವಕಾಶಗಳು, ಆಟಗಾರರ ಗುರುತು ಕಾರ್ಯಕ್ರಮಗಳು ಹಾಗೂ ಪಾಲುದಾರ ಸಂಸ್ಥೆಗಳ ವಿವಿಧ ಚಟುವಟಿಕೆಗಳು ಪಂದ್ಯಾವಳಿಯ ಭಾಗವಾಗಿದ್ದವು.

ನೋವಾ ಸ್ಪೋರ್ಟ್ಸ್ ಮತ್ತು ಅದರ ಪಾಲುದಾರರು ಆಯೋಜಿಸಿದ್ದ ಚಟುವಟಿಕೆಗಳು ಬಾಲಕಿಯರ ಗಮನ ಸೆಳೆದ ಪ್ರಮುಖ ಆಕರ್ಷಣೆಯಾಗಿದ್ದವು. ಫುಟ್ಬೌಲಿಂಗ್, ಟಾರ್ಗೆಟ್ ವಾಲ್ ಚಾಲೆಂಜ್ಗಳು, ಐಸ್ಕ್ರೀಂ ಹಾಗೂ ಎಲೆಕ್ಟ್ರೋಲೈಟ್ ಹೈಡ್ರೇಷನ್ ಸ್ಟೇಷನ್ಗಳು, ಫೋಟೋ ಆಪರ್ಚುನಿಟಿಗಳು ಮತ್ತು ಪಾಸ್ಪೋರ್ಟ್ ಸ್ಟಾಂಪಿಂಗ್ನಂತಹ ವಿವಿಧ ಆಕ್ಟಿವೇಷನ್ಗಳು ಬಾಲಕಿಯರಿಗೆ ವಿಶೇಷ ಅನುಭವ ನೀಡಿದವು. ಪ್ರತಿ ಚಟುವಟಿಕೆಯನ್ನೂ ಬಾಲಕಿಯರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರ್ತಿಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸೆಮಿಫೈನಲ್ ಮತ್ತು ಫೈನಲ್ ಗಳು ನೇರ ಪ್ರಸಾರ
ಮೂರು ವಯೋಮಾನದ ವಿಭಾಗಗಳ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಯಿತು. ಸಂಪೂರ್ಣ ಪಂದ್ಯಗಳ ವಿಡಿಯೊಗಳು ಸ್ಪೋರ್ಟ್ಸ್ ವೋಟ್ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿವೆ.
ಒಂದೇ ವೇದಿಕೆಗೆ ಕರೆತರುವ ಮೂಲಕ, ಸೂಪರ್ನೋವಾ ಫುಟ್​ಬಾಲ್ ಚಾಂಪಿಯನ್​ಷಿಪ್​ ಬಾಲಕಿಯರ ಶಾಲಾ ಮಟ್ಟದ ಫುಟ್​ಬಾಲ್​ಗೆ ಹೊಸ ಉತ್ಸಾಹ ಮತ್ತು ಹೊಸ ಮಾನದಂಡವನ್ನು ಪರಿಚಯಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net