FIFA WorldCUp: ಸ್ಪೇನ್​ ಗೆಲ್ಲಿಸಿದ ಬೇನಾ ಗೋಲು; ಹೊರಬಿದ್ದ ಉರುಗ್ವೆ!

FIFA WorldCUp: ಸ್ಪೇನ್​ ಗೆಲ್ಲಿಸಿದ ಬೇನಾ ಗೋಲು; ಹೊರಬಿದ್ದ ಉರುಗ್ವೆ!
FIFA WorldCUp: ಸ್ಪೇನ್​ ಗೆಲ್ಲಿಸಿದ ಬೇನಾ ಗೋಲು; ಹೊರಬಿದ್ದ ಉರುಗ್ವೆ!
Published on
ಗ್ವಾಡಲಜರ: ಉರುಗ್ವೆ ಗೋಲು ಕೀಪರ್ ಫೆರ್ನಾಂಡೊ ಮುಸ್ಲೆರಾ ಮಾಡಿದ ಎಡವಟ್ಟಿನಿಂದ ಲಾಭ ಪಡೆದ ಲಾ ರೋಜಾ ಖ್ಯಾತಿಯ ಸ್ಪೇನ್​ ತಂಡ ಫಿಫಾ ವಿಶ್ವಕಪ್​ (FIFA WorldCUp) ಟೂರ್ನಿಯಲ್ಲಿ ಎಚ್​ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್​ ಹಂತಕ್ಕೇರಿದೆ. ಸ್ಪೇನ್​ ಎದುರು 0-1ರಿಂದ ಪರಾಭವಗೊಂಡ 2 ಬಾರಿಯ ಚಾಂಪಿಯನ್​ ಉರುಗ್ವೆ ಗುಂಪಿನಲ್ಲಿ 3ನೇ ಸ್ಥಾನ ಪಡೆದರೂ, ಒಂದೂ ಗೆಲುವಿಲ್ಲದೆ ಕೇವಲ 2 ಅಂಕದೊಂದಿಗೆ ಟೂರ್ನಿಯಿಂದ ಹೊರಬಿದ್ದಿತು.
ಭಾರತೀಯ ಕಾಲಮಾನ ಪ್ರಕಾರ ಶನಿವಾರ ಬೆಳಗ್ಗೆ ನಡೆದ ಪಂದ್ಯದ 42ನೇ ನಿಮಿಷದಲ್ಲಿ ಅಲೆಕ್ಸ್​ ಬೇನಾ ಗೋಲು ಪೆಟ್ಟಿಗೆಯತ್ತ ಹೊಡೆದ ಚೆಂಡನ್ನು ಗೋಲಿ ಮುಸ್ಲೆರಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಫಲರಾದರು. ಅವರ ಕೈಜಾರಿದ ಚೆಂಡು ಗೋಲು ಪೆಟ್ಟಿಗೆಯೊಳಗೆ ಸೇರಿ ಗೋಲಾಯಿತು. ಟೂರ್ನಿಯಲ್ಲಿ 3ನೇ ಬಾರಿ ಈ ರೀತಿಯ ತಪ್ಪು ಮಾಡಿದ 40 ವರ್ಷದ ಮುಸ್ಲೆರಾರನ್ನು ಉರುಗ್ವೆ ಕೋಚ್​ ಮಾರ್ಸೆಲೊ ಬೀಲ್ಸಾ ದ್ವೀತಿಯಾರ್ಧದಲ್ಲಿ ಹೊರದಬ್ಬಿದರು. ಸೆರ್ಗಿಯೋ ರಾಚೆಟ್​ ದ್ವೀತಿಯಾರ್ಧದಲ್ಲಿ ಬದಲಿಗರಾಗಿ ಉರುಗ್ವೆ ಗೋಲು ಪೆಟ್ಟಿಗೆಯನ್ನು ಯಶಸ್ವಿಯಾಗಿ ಕಾದರು. ಆದರೆ ಸ್ಪೇನ್​ ರಕ್ಷಣಾ ವ್ಯೂಹವನ್ನೂ ಉರುಗ್ವೆ ಬೇಧಿಸದ ಕಾರಣ ಸೋಲು ತಪ್ಪಿಸಲಾಗಲಿಲ್ಲ. ಪಂದ್ಯದ ಇಂಜುರಿ ಸಮಯದಲ್ಲಿ ಸ್ಪೇನ್​ ಡಿಫೆಂಡರ್​ ಕ್ಯುಬರ್ಸಿ ಟ್ಯಾಕಲ್​ ಮಾಡಿದ ಉರುಗ್ವೆಯ ಅಗಸ್ಟಿನ್​ ಕ್ಯಾನೊಬಿಯೊ (90+4) ಕೆಂಪು ಕಾರ್ಡ್​ ಪಡೆದು ಹೊರನಡೆದರು.

ಫಿಫಾ ರ್ಯಾಂಕಿಂಗ್​ನಲ್ಲಿ 19ನೇ ಸ್ಥಾನದಲ್ಲಿರುವ ಉರುಗ್ವೆ ಟೂರ್ನಿಯಿಂದ ಇದುವರೆಗೆ ಹೊರಬಿದ್ದ ಗರಿಷ್ಠ ರ್ಯಾಂಕ್​ನ ತಂಡವೆನಿಸಿದೆ. ಸ್ಪೇನ್​ ಯುವ ಸ್ಟ್ರೆಕರ್​ ಲ್ಯಾಮಿನ್​ ಯಮಲ್​ ಪಂದ್ಯದ 76ನೇ ನಿಮಿಷದಲ್ಲಿ ಹೊರನಡೆದರು. ವೆನೆಜುವೆಲಾ ಭೂಕಂಪದಲ್ಲಿ ಮೃತಪಟ್ಟವರ ಗೌರವಾರ್ಥ ಪಂದ್ಯಕ್ಕೆ ಮುನ್ನ ಉಭಯ ತಂಡಗಳ ಆಟಗಾರರು ಒಂದು ನಿಮಿಷ ಮೌನಾಚರಣೆ ನಡೆಸಿದರು.
ಉರುಗ್ವೆ: 0
ಸ್ಪೇನ್​: 1
*ಅಲೆಕ್ಸ್​ ಬೇನಾ (42)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net