ಪ್ರತಿಷ್ಠಿತ ಗೋಥಿಯಾ ಕಪ್​ಗೆ ಬೆಂಗಳೂರಿನ ನಿಶ್ಚಲ್​, ಅದ್ವಿಕ್​ ಆಯ್ಕೆ

ಪ್ರತಿಷ್ಠಿತ ಗೋಥಿಯಾ ಕಪ್​ಗೆ ಬೆಂಗಳೂರಿನ ನಿಶ್ಚಲ್​, ಅದ್ವಿಕ್​ ಆಯ್ಕೆ
ಪ್ರತಿಷ್ಠಿತ ಗೋಥಿಯಾ ಕಪ್​ಗೆ ಬೆಂಗಳೂರಿನ ನಿಶ್ಚಲ್​, ಅದ್ವಿಕ್​ ಆಯ್ಕೆ
Published on
ಬೆಂಗಳೂರು: ಸ್ವೀಡನ್​ನ ಗೋಥೆನರ್ಬಗ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಗೋಥಿಯಾ ಕಪ್​ (Gothia Cup) ಫುಟ್​ಬಾಲ್​ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಬೆಂಗಳೂರಿನ ನಿಶ್ಚಲ್​ ಎನ್​. ಕರ್ಣಮ್​ ಮತ್ತು ಅದ್ವಿಕ್​ ದಯಾನಂದ ಆಯ್ಕೆಯಾಗಿದ್ದಾರೆ.

ಯಲಹಂಕದ ಫ್ರಾನ್ಸಿಸ್​ ಕ್ಸೇವಿಯರ್​ ಫುಟ್​ಬಾಲ್​ ಅಕಾಡೆಮಿಯ ಇವರಿಗೆ ಕ್ರಿಸ್ಟೋರ್​ ಸತೀಶ್​ ಮುಖ್ಯ ಕೋಚ್​ ಆಗಿದ್ದಾರೆ. ನಿಶ್ಚಲ್​ 14-16 ವಯೋಮಿತಿ ಮತ್ತು ಅದ್ವಿಕ್​ 13 ವಯೋಮಿತಿ ವಿಭಾಗದಲ್ಲಿ ಆಡಲಿದ್ದಾರೆ. ವಿಶ್ವದೆಲ್ಲೆಡೆಯ 2 ಸಾವಿರಕ್ಕೂ ಅಧಿಕ ಕ್ಲಬ್​ ತಂಡಗಳು ಆಡುವ ಗೋಥಿಯಾ ಕಪ್​, ವಿಶ್ವದ ಅತಿದೊಡ್ಡ ಯೂತ್​ ಫುಟ್​ಬಾಲ್​ ಟೂರ್ನಿ ಎನಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net