ಕೊಲಂಬಿಯಾ ಎದುರು ಗೋಲುರಹಿತ ಡ್ರಾಕ್ಕೆ ಪೋರ್ಚುಗಲ್‌ ತೃಪ್ತಿ: ತಪ್ಪಿದ ಮೆಸ್ಸಿ-ರೊನಾಲ್ಡೊ ಮುಖಾಮುಖಿ?

ಕೊಲಂಬಿಯಾ ಎದುರು ಗೋಲುರಹಿತ ಡ್ರಾಕ್ಕೆ ಪೋರ್ಚುಗಲ್‌ ತೃಪ್ತಿ: ತಪ್ಪಿದ ಮೆಸ್ಸಿ-ರೊನಾಲ್ಡೊ ಮುಖಾಮುಖಿ?
ಕೊಲಂಬಿಯಾ ಎದುರು ಗೋಲುರಹಿತ ಡ್ರಾಕ್ಕೆ ಪೋರ್ಚುಗಲ್‌ ತೃಪ್ತಿ: ತಪ್ಪಿದ ಮೆಸ್ಸಿ-ರೊನಾಲ್ಡೊ ಮುಖಾಮುಖಿ?
Published on
ಮಿಯಾಮಿ: ಸ್ಟಾರ್ ಆಟಗಾರ ಹಾಗೂ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ ಮತ್ತೊಮ್ಮೆ ಗೋಲು ಗಳಿಸಲು ವಿಲರಾಗುವುದರೊಂದಿಗೆ ಪೋರ್ಚುಗಲ್ ತಂಡ ಫಿಫಾ ವಿಶ್ವಕಪ್ 23ನೇ ಆವೃತ್ತಿಯಲ್ಲಿ ಕೊಲಂಬಿಯಾ ಎದುರು ಗೋಲು ರಹಿತ ಡ್ರಾಕ್ಕೆ ತೃಪ್ತಿಪಟ್ಟು, ಕೆ ಗುಂಪಿನ 2ನೇ ಸ್ಥಾನಿಯಾಗಿ 32ರ ಘಟ್ಟಕ್ಕೇರಿದೆ. ಕೊಲಂಬಿಯಾ ಗುಂಪಿನ ಅಗ್ರಸ್ಥಾನ ಕಾಯ್ದುಕೊಂಡಿತು.
ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಕೊಲಂಬಿಯಾ ಹಲವು ಗೋಲು ಗಳಿಸುವ ಅವಕಾಶ ಸೃಷ್ಟಿಸಿಕೊಂಡರೂ, ಫಿನಿಶಿಂಗ್ ನೀಡಲು ವಿಲವಾಯಿತು. ಸಂಪೂರ್ಣ 90 ನಿಮಿಷಗಳ ಕಾಲ ಆಡಿದ 41 ವರ್ಷದ ರೊನಾಲ್ಡೊರನ್ನು ಕಟ್ಟಿಹಾಕುವಲ್ಲಿ ಕೊಲಂಬಿಯಾ ಡಿಫೆಂಡರ್‌ಗಳು ಸಫಲರಾದರು. ಈ ಪಂದ್ಯದ ಕನಿಷ್ಠ ಟಿಕೆಟ್ ಬೆಲೆಯೇ 3.30 ಲಕ್ಷ ರೂ. ಆಗಿತ್ತು.
ಉಭಯ ತಂಡಗಳಿಗೂ ಪಂದ್ಯಕ್ಕೆ ಮೊದಲೇ ನಾಕೌಟ್ ಪ್ರವೇಶ ಖಚಿತವೆನಿಸಿತ್ತು. 32ರ ಘಟ್ಟದಲ್ಲಿ ಪೋರ್ಚುಗಲ್‌ಗೆ 2018ರ ರನ್ನರ್‌ಅಪ್ ಕ್ರೊಯೇಷಿಯಾ ಮತ್ತು ಕೊಲಂಬಿಯಾಗೆ ಘಾನಾ ಎದುರಾಗಲಿದೆ. ಪೋರ್ಚುಗಲ್‌ಗೆ 16ರ ಘಟ್ಟದಲ್ಲಿ ಸ್ಪೇನ್ ಎದುರಾಗುವ ಸಾಧ್ಯತೆಗಳಿವೆ.
ಮೆಸ್ಸಿ-ರೊನಾಲ್ಡೊ
ಮುಖಾಮುಖಿ ಇಲ್ಲ?
ಅರ್ಜೆಂಟೀನಾ-ಪೋರ್ಚುಗಲ್ ತಂಡಗಳೆರಡೂ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ್ದರೆ ಮೆಸ್ಸಿ-ರೊನಾಲ್ಡೊ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿ ಆಗುವ ಸಾಧ್ಯತೆ ತಪ್ಪಿದೆ. ಅರ್ಜೆಂಟೀನಾ ಅಗ್ರಸ್ಥಾನ ಗಳಿಸಿದರೂ, ಪೋರ್ಚುಗಲ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು ಇದಕ್ಕೆ ಕಾರಣ. ಇವೆರಡು ತಂಡಗಳೂ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದ್ದರೂ, 16ರ ಘಟ್ಟದಲ್ಲಿ ಮುಖಾಮುಖಿ ಆಗುತ್ತಿದ್ದವು. ಆದರೆ ಇನ್ನು ಉಭಯ ತಂಡಗಳು ಫೈನಲ್‌ನಲ್ಲಷ್ಟೇ ಮುಖಾಮುಖಿ ಆಗಬಹುದಾಗಿದೆ. ಮೆಸ್ಸಿ-ರೊನಾಲ್ಡೊ ಆಡಿದ ಹಿಂದಿನ 5 ವಿಶ್ವಕಪ್‌ಗಳಲ್ಲೂ ಮುಖಾಮುಖಿ ಆಗಿರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net