ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಬ್ರೆಜಿಲ್ ಆಟಗಾರ ವಿನಿಸಿಯಸ್ ಜೂನಿಯರ್, ನೇಮರ್ ಅವರ ಮರಳಿಕೆಯನ್ನು ಸ್ವಾಗತಿಸಿದರು. "ಇದು ನಮ್ಮೆಲ್ಲರಿಗೂ ಮಹತ್ವದ ಕ್ಷಣ. ನಮ್ಮ ಆದರ್ಶ ಆಟಗಾರ ಮರಳಿದ್ದಾರೆ. ಗಾಯದ ನಡುವೆಯೂ ಅವರು ಇಲ್ಲಿಗೆ ಬರಲು ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಲಿ ಎಂದು ಆಶಿಸುತ್ತೇನೆ" ಎಂದು ಹೇಳಿದರು. ಬ್ರೆಜಿಲ್ ತಂಡದ ಅಭಿಮಾನಿಗಳಿಗೆ ನೇಮರ್ ಅವರ ಮರಳಿಕೆ ಹೊಸ ಉತ್ಸಾಹ ಮೂಡಿಸಿದ್ದು, ಮುಂದಿನ ಪಂದ್ಯಗಳಲ್ಲೂ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ,(ಏಜೆನ್ಸೀಸ್).