ಫಿಫಾ ವಿಶ್ವಕಪ್​ನಲ್ಲಿ ಆಡಿದ ಮೊದಲ ಅಮ್ಮ-ಮಗ ಎನಿಸಿದ ಜೆನ್ನಿ-ಬಿಂಡನ್​!

ಫಿಫಾ ವಿಶ್ವಕಪ್​ನಲ್ಲಿ ಆಡಿದ ಮೊದಲ ಅಮ್ಮ-ಮಗ ಎನಿಸಿದ ಜೆನ್ನಿ-ಬಿಂಡನ್​!
ಫಿಫಾ ವಿಶ್ವಕಪ್​ನಲ್ಲಿ ಆಡಿದ ಮೊದಲ ಅಮ್ಮ-ಮಗ ಎನಿಸಿದ ಜೆನ್ನಿ-ಬಿಂಡನ್​!
Published on
ನ್ಯೂಯಾರ್ಕ್​: ನ್ಯೂಜಿಲೆಂಡ್​ನ ಟೈಲರ್​ ಬಿಂಡನ್​ ಇರಾನ್​ ವಿರುದ್ಧದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಫಿಫಾ ವಿಶ್ವಕಪ್​ಗೆ (FIFA World Cup) ಪದಾರ್ಪಣೆ ಮಾಡುವುದರೊಂದಿಗೆ ಹೊಸ ಇತಿಹಾಸವೊಂದು ಸೃಷ್ಟಿಸಿದರು. ಯಾಕೆಂದರೆ ಇದಕ್ಕೆ ಮುನ್ನ 2007 ಮತ್ತು 2011ರ ಮಹಿಳೆಯರ ಫಿಫಾ ವಿಶ್ವಕಪ್​ನಲ್ಲಿ ಅವರ ತಾಯಿ ಜೆನ್ನಿ ನ್ಯೂಜಿಲೆಂಡ್​ ತಂಡದ ಗೋಲು ಕೀಪರ್​ ಆಗಿ ಆಡಿದ್ದರು. ಹೀಗಾಗಿ ಫಿಫಾ ವಿಶ್ವಕಪ್​ನಲ್ಲಿ ಆಡಿದ ಮೊದಲ ತಾಯಿ-ಮಗ ಎಂಬ ಹೆಗ್ಗಳಿಕೆಗೆ ಜೆನ್ನಿ-ಬಿಂಡನ್​ ಪಾತ್ರರಾದರು.

ಜೆನ್ನಿ 2008 ಮತ್ತು 2012ರ ಒಲಿಂಪಿಕ್ಸ್​ನಲ್ಲೂ ಭಾಗವಹಿಸಿದ್ದರು. 21 ವರ್ಷದ ಬಿಂಡನ್​ ಇಂಗ್ಲಿಷ್​ ಪ್ರೀಮಿಯರ್​ ಲೀಗ್​ನಲ್ಲಿ ನಾಟಿಂಗ್​ಹ್ಯಾಂ ಫಾರೆಸ್ಟ್​ ತಂಡದ ಆಟಗಾರರಾಗಿದ್ದು, ಕಿವೀಸ್​ ಪರ ಮೊದಲ ಬಾರಿ ಕಣಕ್ಕಿಳಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ತಾಯಿಯೊಂದಿಗೆ, ನ್ಯೂಜಿಲೆಂಡ್​ ವಾಲಿಬಾಲ್​ ತಂಡದ ಮಾಜಿ ನಾಯಕರಾಗಿರುವ ಅವರ ತಂದೆ ಗ್ರಾಂಟ್​ ಕೂಡ ಸಂಭ್ರಮಿಸಿದರು.

ಫಿಫಾ ವಿಶ್ವಕಪ್​ನಲ್ಲಿ ಈ ಹಿಂದೆ 25ಕ್ಕೂ ಅಧಿಕ ತಂದೆ-ಮಗ ಆಡಿದ ದೃಷ್ಟಾಂತಗಳಿವೆ. ಆದರೆ ತಾಯಿ-ಮಗ ಆಡಿದ ಮೊದಲ ದೃಷ್ಟಾಂತ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net