ಗ್ವಾಡಲಜರ (ಮೆಕ್ಸಿಕೋ): ಸಹ-ಆತಿಥೇಯ ಮೆಕ್ಸಿಕೋ (Mexico) ತಂಡ ಎದುರಾಳಿ ದಕ್ಷಿಣ ಕೊರಿಯಾ ತಂಡ ರಕ್ಷಣಾ ವಿಭಾಗದಲ್ಲಿ ಮಾಡಿದ ಎಡವಟ್ಟಿನಿಂದ ಲಾಭ ಪಡೆಯುವ ಮೂಲಕ ಫಿಫಾ ವಿಶ್ವಕಪ್ (FIFA WorldCup) 23ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ನಾಕೌಟ್ ಪ್ರವೇಶ ಖಚಿತಪಡಿಸಿಕೊಂಡಿದೆ. ಇನ್ನು 31 ತಂಡಗಳಿಗೆ ನಾಕೌಟ್ ಟಿಕೆಟ್ ಒಲಿಸಿಕೊಳ್ಳಲು ಅವಕಾಶವಿದೆ. ಕಳೆದ ಆವೃತ್ತಿಯಲ್ಲಿ ಗ್ರೂಪ್ ಹಂತದಿಂದ ಮೇಲೇರಲು ವಿಫಲವಾಗಿದ್ದ ಮೆಕ್ಸಿಕೋ ಈ ಬಾರಿ ತವರು ನೆಲದಲ್ಲಿ ಸತತ 2ನೇ ಗೆಲುವು ದಾಖಲಿಸುವ ಮೂಲಕ, ಕೊನೇ ಲೀಗ್ ಪಂದ್ಯಕ್ಕೆ ಮುನ್ನವೇ ನಾಕೌಟ್ ಪ್ರವೇಶ ಖಾತ್ರಿಪಡಿಸಿಕೊಂಡಿರುವುದು ವಿಶೇಷವಾಗಿದೆ.