ಸ್ಪೇನ್ ವಿರುದ್ಧ ಸೋತ ಬೆನ್ನಲ್ಲೇ ರಣರಂಗವಾದ ಮೈದಾನ: ಕೈಕೈ ಮಿಲಾಯಿಸಿದ ಅರ್ಜೆಂಟೀನಾ-ಸ್ಪೇನ್ ಆಟಗಾರರು! ವಿಡಿಯೋ ವೈರಲ್​... FIFA World Cup Final

ಸ್ಪೇನ್ ವಿರುದ್ಧ ಸೋತ ಬೆನ್ನಲ್ಲೇ ರಣರಂಗವಾದ ಮೈದಾನ: ಕೈಕೈ ಮಿಲಾಯಿಸಿದ ಅರ್ಜೆಂಟೀನಾ-ಸ್ಪೇನ್ ಆಟಗಾರರು! ವಿಡಿಯೋ ವೈರಲ್​... FIFA World Cup Final
ಸ್ಪೇನ್ ವಿರುದ್ಧ ಸೋತ ಬೆನ್ನಲ್ಲೇ ರಣರಂಗವಾದ ಮೈದಾನ: ಕೈಕೈ ಮಿಲಾಯಿಸಿದ ಅರ್ಜೆಂಟೀನಾ-ಸ್ಪೇನ್ ಆಟಗಾರರು! ವಿಡಿಯೋ ವೈರಲ್​... FIFA World Cup Final
Published on

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ರಣರಂಗವಾಗಿ ಮಾರ್ಪಟ್ಟ ಕ್ರೀಡಾಂಗಣ
  • ಸ್ಪೇನ್ ವಿರುದ್ಧ ಸೋತ ನಿರಾಶೆಯಲ್ಲಿ ಎದುರಾಳಿ ಆಟಗಾರರ ಮೇಲೆ ದಾಳಿ ನಡೆಸಿದ ಅರ್ಜೆಂಟೀನಾ ಫುಟ್‌ಬಾಲಿಗರು
  • ವಿಶ್ವಕಪ್ ಫೈನಲ್ ಸೋಲಿನ ನಂತರ ಸ್ಪೇನ್ ಆಟಗಾರರೊಂದಿಗೆ ಕೈಕೈ ಮಿಲಾಯಿಸಿದ ಅರ್ಜೆಂಟೀನಾ ತಂಡದ ವಿಡಿಯೋ ವೈರಲ್
  • ಮೈದಾನದಲ್ಲಿ ಗಲಾಟೆ ನಡೆಸಿದ ಅರ್ಜೆಂಟೀನಾದ ಲಿಯಾಂಡ್ರೊ ಪರೇಡೆಸ್‌ಗೆ ಕೆಂಪು ಕಾರ್ಡ್ ನೀಡಿ ಶಿಸ್ತುಕ್ರಮ ಜರುಗಿಸಿದ ಫಿಫಾ
FIFA World Cup Final : ಸ್ಪೇನ್ ವಿರುದ್ಧ 0-1 ಅಂತರದಲ್ಲಿ ಸೋಲನ್ನು ಅನುಭವಿಸುತ್ತಿದ್ದಂತೆಯೇ ಅರ್ಜೆಂಟೀನಾ ತಂಡದ ಆಟಗಾರರ ತಾಳ್ಮೆಯ ಕಟ್ಟೆ ಹೊಡೆದು, ಕ್ಷಣಾರ್ಧದಲ್ಲೇ ಮೈದಾನ ರಣರಂಗವಾಗಿ ಮಾರ್ಪಟ್ಟ ಪ್ರಸಂಗ ಜರುಗಿದೆ. ವಿಜಯೋತ್ಸವದಲ್ಲಿದ್ದ ಸ್ಪೇನ್ ಆಟಗಾರರೊಂದಿಗೆ ಅರ್ಜೆಂಟೀನಾ ಆಟಗಾರರು ಕೈಕೈ ಮಿಲಾಯಿಸಿ, ಪರಸ್ಪರ ದಾಳಿ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅದನ್ನು ನೋಡಿ ಫುಟ್ಬಾಲ್​ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ 1-0 ಅಂತರದ ಜಯ ಬಾರಿಸಿದ ಸ್ಪೇನ್ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರೆ, ಇತ್ತ ಪಂದ್ಯ ಮುಗಿಯುತ್ತಿದ್ದಂತೆಯೇ ಅರ್ಜೆಂಟೀನಾ ಆಟಗಾರರಲ್ಲಿ ಸೋಲಿನ ತೀವ್ರ ನಿರಾಶೆ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಕಹಿ ಸೋಲಿನ ಬೆನ್ನಲ್ಲೇ ಉಭಯ ತಂಡಗಳ ಆಟಗಾರರ ನಡುವೆ ಆರಂಭವಾದ ಸಣ್ಣ ವಾಕ್ಸಮರ ಕ್ರಮೇಣ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಕೊನೆಗೆ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿತು. ಆಟಗಾರರು ಪರಸ್ಪರ ತಳ್ಳಾಟ ನಡೆಸಿ, ಅಸಮಾಧಾನದಿಂದಲೇ ಹಸ್ತಲಾಘವ ಮಾಡುತ್ತಿದ್ದ ವಿಚಿತ್ರ ದೃಶ್ಯ ಮೈದಾನದಲ್ಲಿ ಕಂಡುಬಂತು.
ಮೈದಾನದಲ್ಲಿ ಸ್ಥಿತಿ ಕೈಮೀರಿ ಹೋಗುತ್ತಿದ್ದಂತೆಯೇ ಅರ್ಜೆಂಟೀನಾದ ಮುಖ್ಯ ತರಬೇತುದಾರ ಹಾಗೂ ತಾಂತ್ರಿಕ ಸಿಬ್ಬಂದಿ ಧಾವಿಸಿ ಬಂದು ಆಟಗಾರರನ್ನು ಶಾಂತಗೊಳಿಸಲು ಹರಸಾಹಸ ಪಟ್ಟರು. ಬಿಸಿಬಿಸಿಯಾದ ವಾತಾವರಣವನ್ನು ತಿಳಿಗೊಳಿಸಲು ಮಧ್ಯಪ್ರವೇಶಿಸಿದರೂ ಸಹ, ಉಭಯ ತಂಡಗಳ ಆಟಗಾರರ ನಡುವೆ ದೀರ್ಘಕಾಲದವರೆಗೆ ಉದ್ವಿಗ್ನತೆ ನೆಲೆಸಿತ್ತು. ಈ ಘಟನೆಯ ವಿಡಿಯೋ ತುಣುಕುಗಳು ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಲಭ್ಯವಿರುವ ವಿಡಿಯೋದಲ್ಲಿ, ಅರ್ಜೆಂಟೀನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೇಡೆಸ್ ಅವರು ಸ್ಪೇನ್‌ನ ಯುವ ತಾರೆಗಳಾದ ಗಾವಿ ಮತ್ತು ಎರಿಕ್ ಗಾರ್ಸಿಯಾ ಅವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದು ಕಂಡುಬಂದಿದೆ. ವಾಕ್ಸಮರದ ನಡುವೆಯೇ ಪರೇಡೆಸ್ ಎದುರಾಳಿ ಆಟಗಾರನನ್ನು ಜೋರಾಗಿ ತಳ್ಳಿ, ಬಳಿಕ ಅವರತ್ತ ಹಸ್ತಲಾಘವ ಚಾಚುವ ವಿಚಿತ್ರ ದೃಶ್ಯವೂ ದಾಖಲಾಗಿದೆ.
ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದ ನಂತರ ನಡೆದ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಫಿಫಾ, ಗಲಾಟೆಗೆ ಪ್ರಮುಖ ಕಾರಣಕರ್ತರಾದ ಲಿಯಾಂಡ್ರೊ ಪರೇಡೆಸ್‌ಗೆ ರೆಡ್ ಕಾರ್ಡ್ ನೀಡುವ ಮೂಲಕ ಕಠಿಣ ಶಿಸ್ತು ಕ್ರಮ ಕೈಗೊಂಡಿದೆ. ಇದರೊಂದಿಗೆ ಪರೇಡೆಸ್ ಈ ಬಾರಿಯ ವಿಶ್ವಕಪ್ ಫೈನಲ್‌ನಲ್ಲಿ ಕೆಂಪು ಕಾರ್ಡ್ ಪಡೆದ ಎರಡನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ, ಪಂದ್ಯದ ಅವಧಿಯಲ್ಲೇ ಅರ್ಜೆಂಟೀನಾದ ಪ್ರಮುಖ ಮಿಡ್‌ಫೀಲ್ಡರ್ ಎಂಜೊ ಫರ್ನಾಂಡಿಸ್ ಕೂಡ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net