38 ವರ್ಷದ ಲಿಯೋನೆಲ್ ಮೆಸ್ಸಿ ತಮ್ಮ ಎಡಗಾಲಿಗೆ 8,163 ಕೋಟಿ ರೂ. (900 ದಶಲಕ್ಷ ಡಾಲರ್) ಮೊತ್ತದ ವಿಮೆ (foot insurance) ಹೊಂದಿದ್ದಾರೆ. ಇದರ ಷರತ್ತುಗಳ ಅನ್ವಯ ಅವರು, ಭಾರತದಲ್ಲಿ ಪ್ರದರ್ಶನ ಫುಟ್ಬಾಲ್ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ವಿಮಾ ಕರಾರಿನ ಅನ್ವಯ ಅವರು, ಕ್ಲಬ್ ಮತ್ತು ದೇಶದ ಪರ ಹೊರತಾಗಿ ಇತರ ಪಂದ್ಯಗಳನ್ನು ಆಡುವಂತಿಲ್ಲ.