Football: ಭಾರತಕ್ಕೆ ಕಿರಿಯರ ಏಷ್ಯನ್​ ಕಪ್​ ಅರ್ಹತೆ

Football: ಭಾರತಕ್ಕೆ ಕಿರಿಯರ ಏಷ್ಯನ್​ ಕಪ್​ ಅರ್ಹತೆ
Football: ಭಾರತಕ್ಕೆ ಕಿರಿಯರ ಏಷ್ಯನ್​ ಕಪ್​ ಅರ್ಹತೆ
Published on
ಅಹಮದಾಬಾದ್​: ಭಾರತದ ಕಿರಿಯರ ಫುಟ್​ಬಾಲ್​ ತಂಡ 17 ವಯೋಮಿತಿ ಬಾಲಕರ ಎಎಫ್​ಸಿ ಏಷ್ಯನ್​ ಕಪ್​ಗೆ (2026 AFC U17 Asian Cup) ಅರ್ಹತೆ ಸಂಪಾದಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಅರ್ಹತಾ ಸುತ್ತಿನಲ್ಲಿ ಇರಾನ್​ ವಿರುದ್ಧದ ಡಿ ಗುಂಪಿನ ಕೊನೇ ಪಂದ್ಯದಲ್ಲಿ 2-1 ಗೋಲುಗಳಿಂದ ಗೆಲುವು ದಾಖಲಿಸುವ ಮೂಲಕ ಭಾರತ ಈ ಸಾಧನೆ ಮಾಡಿದೆ. ಹಿರಿಯರ ಫುಟ್​ಬಾಲ್​ ತಂಡ ಪರದಾಡುತ್ತಿರುವ ನಡುವೆ ಕಿರಿಯರ ಈ ಸಾಧನೆ ಭಾರತೀಯ ಫುಟ್​ಬಾಲ್​ಗೆ ಹೊಸ ಪುಳಕ ನೀಡಿದೆ.
ಇಕೆಎ ಅರೆನಾದಲ್ಲಿ (EKA Arena) ಭಾನುವಾರ ನಡೆದ ಪಂದ್ಯದಲ್ಲಿ ಡಲ್ಲಲ್​ಮುವೊನ್​ ಗಾಂಗ್ಟೆ (45+1 ನಿಮಿಷ) ಮತ್ತು ಗುನ್​ಲೈಬಾ ವಾಂಗ್​ಕೀರಕ್​ಪಮ್​ (52) ಸಿಡಿಸಿದ ಗೋಲಿನ ನೆರವಿನಿಂದ ಭಾರತ ಗೆಲುವು ಸಾಧಿಸಿತು. ಇದಕ್ಕೆ ಮುನ್ನ ಅಮಿರೆಜಾ ವಲಿಪೂರ್​ 19ನೇ ನಿಮಿಷದಲ್ಲಿ ಸಾಧಿಸಿದ ಗೋಲಿನಿಂದ ಇರಾನ್​ ಆರಂಭಿಕ ಮುನ್ನಡೆ ಸಾಧಿಸಿತ್ತು.

ಮುಂದಿನ 17 ವಯೋಮಿತಿ ಏಷ್ಯನ್​ ಕಪ್​ 2026ರ ಮೇ 7ರಿಂದ 24ರವರೆಗೆ ಸೌದಿ ಅರೇಬಿಯಾದಲ್ಲಿ ನಡೆಯಲಿದ್ದು, ಭಾರತ ತಂಡ 10ನೇ ಬಾರಿ ಟೂರ್ನಿಯಲ್ಲಿ ಆಡಲಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಆಡಲಿವೆ.

ಗುಂಪಿನಲ್ಲಿ 7 ಅಂಕ ಹೊಂದಿದ್ದ ಇರಾನ್​ ಅಜೇಯವಾಗಿತ್ತು ಮತ್ತು ಪಂದ್ಯದಲ್ಲಿ ಫೇವರಿಟ್​ ಆಗಿ ಕಣಕ್ಕಿಳಿದಿತ್ತು. ಇರಾನ್​ ಡ್ರಾ ಸಾಧಿಸಿದರೂ ಮುನ್ನಡೆಯುತ್ತಿತ್ತು. 4 ಅಂಕವನ್ನಷ್ಟೇ ಹೊಂದಿದ್ದ ಭಾರತಕ್ಕೆ ಅರ್ಹತೆ ಸಂಪಾದಿಸಲು ಗೆಲುವು ಅನಿವಾರ್ಯವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net